ADVERTISEMENT

ಬಿಹಾರ | ಮಿಂಚು, ಸಿಡಿಲಾಘಾತ: ಸಾವಿನ ಸಂಖ್ಯೆ 61ಕ್ಕೇರಿಕೆ

ಪಿಟಿಐ
Published 11 ಏಪ್ರಿಲ್ 2025, 13:45 IST
Last Updated 11 ಏಪ್ರಿಲ್ 2025, 13:45 IST
ಬಿಹಾರದ ರಾಜಧಾನಿ ಪಟ್ನಾದಲ್ಲಿ ಸುರಿದ ಮಳೆಯಿಂದ ರಸ್ತೆಯಲ್ಲಿ ನೀರು ನಿಂತು ವಾಹನಗಳ ಸಂಚಾರಕ್ಕೆ ಅಡ್ಡಿಯುಂಟಾಯಿತು–ಪಿಟಿಐ ಚಿತ್ರ
ಬಿಹಾರದ ರಾಜಧಾನಿ ಪಟ್ನಾದಲ್ಲಿ ಸುರಿದ ಮಳೆಯಿಂದ ರಸ್ತೆಯಲ್ಲಿ ನೀರು ನಿಂತು ವಾಹನಗಳ ಸಂಚಾರಕ್ಕೆ ಅಡ್ಡಿಯುಂಟಾಯಿತು–ಪಿಟಿಐ ಚಿತ್ರ   

ಪಾಟ್ನಾ: ಆಲಿಕಲ್ಲು ಮಳೆ, ಮಿಂಚು, ಸಿಡಿಲಿನ ಆಘಾತದಿಂದ ಬಿಹಾರದಲ್ಲಿ ಮೃತಪಟ್ಟವರ ಸಂಖ್ಯೆ 61ಕ್ಕೇರಿಕೆಯಾಗಿದೆ. 

ಗುರುವಾರ ರಾಜ್ಯದ ವಿವಿಧೆಡೆ ಸುರಿದ ಆಲಿಕಲ್ಲು ಮಳೆಯಿಂದ 39 ಮಂದಿ ಮೃತಪಟ್ಟಿದ್ದು, ಮಿಂಚು, ಸಿಡಿಲಿನ ಹೊಡೆತಕ್ಕೆ 22 ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಗುರುವಾರ ರಾತ್ರಿ ವೇಳೆ 25 ಮಂದಿ ಮೃತಪಟ್ಟಿದ್ದರು. ರಾಜ್ಯದ ಎಲ್ಲ ಜಿಲ್ಲೆಗಳ ಅಂಕಿಅಂಶಗಳನ್ನು ಕ್ರೋಢಿಕರಿಸಿದ ವೇಳೆ ಮೃತರ ಸಂಖ್ಯೆ 61 ಕ್ಕೇರಿಕೆಯಾಗಿದೆ. ನಲಂದಾ ಜಿಲ್ಲೆಯೊಂದರಲ್ಲೇ ಗರಿಷ್ಠ 23 ಮಂದಿ ಮೃತಪಟ್ಟಿದ್ದಾರೆ’ ಎಂದು ರಾಜ್ಯ ವಿಪತ್ತು ನಿರ್ವಹಣಾ ಇಲಾಖೆಯು ಬಿಡುಗಡೆಗೊಳಿಸಿದ ಹೇಳಿಕೆಯಲ್ಲಿ ತಿಳಿಸಿದೆ.

ADVERTISEMENT

ಸಿಡಿಲು ಹಾಗೂ ಬಿರುಗಾಳಿಯಿಂದ ದೊಡ್ಡ ಸಂಖ್ಯೆಯಲ್ಲಿ ಮನೆಗಳು ಹಾನಿಗೊಳಗಾಗಿದೆ. 

ಪ್ರಾಕೃತಿಕ ದುರಂತದಲ್ಲಿ ಮೃತಪಟ್ಟವರಿಗೆ ಕಂಬನಿ ಮಿಡಿದಿರುವ ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌, ಮೃತ ಕುಟುಂಬದ ಸದಸ್ಯರಿಗೆ ತಲಾ ₹4 ಲಕ್ಷ ಪರಿಹಾರ ಘೋಷಿಸಿದ್ದಾರೆ. 

‌ಮಿಂಚು, ಸಿಡಿಲಿನ ಹೊಡೆತಕ್ಕೆ ಬಿಹಾರದಲ್ಲಿ ಬುಧವಾರ 13 ಮಂದಿ ಮೃತಪಟ್ಟಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.