ADVERTISEMENT

ಬಿಹಾರ: ಸಂಸದ ಪಪ್ಪು ಯಾದವ್ ಬಂಧನ; ಕಾಂಗ್ರೆಸ್ ಬೃಹತ್‌ ಪ್ರತಿಭಟನೆ

ಪಿಟಿಐ
Published 8 ಫೆಬ್ರುವರಿ 2026, 13:44 IST
Last Updated 8 ಫೆಬ್ರುವರಿ 2026, 13:44 IST
<div class="paragraphs"><p>ಪಪ್ಪು ಯಾದವ್</p></div>

ಪಪ್ಪು ಯಾದವ್

   

ಪಟ್ನಾ: ಬಿಹಾರದ ಪಕ್ಷೇತರ ಸಂಸದ ಪಪ್ಪು ಯಾದವ್ (ರಾಜೇಶ್ ರಂಜನ್) ಅವರ ಬಂಧನ ಖಂಡಿಸಿ ವಿರೋಧ ಪಕ್ಷ ಕಾಂಗ್ರೆಸ್ ಭಾನುವಾರ ಇಲ್ಲಿ ಬೃಹತ್‌ ಪ್ರತಿಭಟನೆ ನಡೆಸಿತು.

ಕಾಂಗ್ರೆಸ್‌ ಕಚೇರಿ ಎದುರು ಸೇರಿದ್ದ ನೂರಾರು ಕಾರ್ಯಕರ್ತರು ‘ರಾಜ್ಯದ ಎನ್‌ಡಿಎ ಸರ್ಕಾರ ರಾಜಕೀಯ ಸೇಡಿನ ಕ್ರಮ ಕೈಗೊಳ್ಳುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿ, ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಪ್ರತಿಕೃತಿ ದಹಿಸಿದರು.

ADVERTISEMENT

ಪೂರ್ಣಿಯಾ ಲೋಕಸಭೆ ಕ್ಷೇತ್ರದ ಸಂಸದ ಪಪ್ಪು ಯಾದವ್ ಅವರನ್ನು 1995ರ ವಂಚನೆ (ದಾಖಲೆ ತಿರುಚಿದ) ಪ್ರಕರಣಕ್ಕೆ ಸಂಬಂಧಿಸಿ ಶುಕ್ರವಾರ ರಾತ್ರಿ ಅವರ ನಿವಾಸದಲ್ಲೇ ಬಂಧಿಸಲಾಗಿದೆ. 

ಪಟ್ನಾ ನ್ಯಾಯಾಲಯ ಯಾದವ್ ಅವರಿಗೆ ಎರಡು ದಿನಗಳ ನ್ಯಾಯಾಂಗ ಬಂಧನ ವಿಧಿಸಿದ್ದು, ಅನಾರೋಗ್ಯ ಕಾರಣ ಪಟ್ನಾ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ಸೋಮವಾರ (ಇಂದು) ಪ್ರಕರಣದ ವಿಚಾರಣೆ ನಡೆಯಲಿದೆ.

ಈ ಮಧ್ಯೆ ಪತ್ರಕರ್ತರೊಂದಿಗೆ ಮಾತನಾಡಿದ ವಿಧಾನಸಭೆ ವಿರೋಧ ಪಕ್ಷದ ನಾಯಕ ತೇಜಸ್ವಿ ಯಾದವ್ , ‘ ರಾಜ್ಯದಲ್ಲಿ ಸರ್ವಾಧಿಕಾರ ಸೃಷ್ಟಿಯಾಗಿದೆ. ಅಪರಾಧಿಗಳು ಸ್ವಚ್ಛಂದವಾಗಿದ್ದಾರೆ. ತಪ್ಪು ಮಾಡದವರನ್ನು ಬಂಧಿಸಲಾಗುತ್ತಿದೆ’ ಎಂದು ಆರೋಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.