ADVERTISEMENT

ಬಿಹಾರ: ವಿಶ್ವಾಸಮತ ಯಾಚನೆಗೂ ಮುನ್ನ ಸ್ಪೀಕರ್ ವಿಜಯ್ ಕುಮಾರ್ ಸಿನ್ಹಾ ರಾಜೀನಾಮೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ಆಗಸ್ಟ್ 2022, 6:38 IST
Last Updated 24 ಆಗಸ್ಟ್ 2022, 6:38 IST
   

ಪಟ್ನಾ: ಬಿಹಾರ ವಿಧಾನಸಭೆಯಲ್ಲಿ ಮಹಾ ಮೈತ್ರಿ ಸರ್ಕಾರ ವಿಶ್ವಾಸಮತ ಯಾಚಿಸುವುದಕ್ಕೂ ಮುನ್ನವೇ ಸ್ಪೀಕರ್ ಹುದ್ದೆಗೆ ವಿಜಯ್ ಕುಮಾರ್ ಸಿನ್ಹಾ ಬುಧವಾರ ರಾಜೀನಾಮೆ ನೀಡಿದರು.

ಇದಕ್ಕೂ ಮುನ್ನ ಆಡಳಿತಾರೂಢ ಮೈತ್ರಿಕೂಟವು ಸಿನ್ಹಾ ವಿರುದ್ಧ ಅವಿಶ್ವಾಸ ನಿಲುವಳಿ ಮಂಡಿಸಲು ಮನವಿ ಸಲ್ಲಿಸಿತ್ತು.

ಇದಕ್ಕೆ ಉತ್ತರಿಸಿದ ಸಿನ್ಹಾ, ಅವಿಶ್ವಾಸ ನಿಲುವಳಿ ಸ್ಪಷ್ಟವಾಗಿಲ್ಲ. ಅವಿಶ್ವಾಸ ನಿಲುವಳಿ ಮಂಡನೆಗಾಗಿ 9 ಮಂದಿ ಬರೆದ ಪತ್ರಗಳ ಪೈಕಿ 8 ಪತ್ರಗಳು ನಿಯಮಕ್ಕೆ ಅನುಗುಣವಾಗಿಲ್ಲ ಎಂದು ಹೇಳಿದರು.

ADVERTISEMENT

ಬಳಿಕ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಿದ ಅವರು, ರಾಜೀನಾಮೆ ನಿರ್ಧಾರ ಪ್ರಕಟಿಸಿದರು.

ಕೆಲ ದಿನಗಳ ಹಿಂದೆ ಬಿಜೆಪಿ ಜತೆಗಿನ ಮೈತ್ರಿ ಕಡಿದುಕೊಂಡಿದ್ದ ಜೆಡಿ(ಯು), ಆರ್‌ಜೆಡಿ (ರಾಷ್ಟ್ರೀಯ ಜನತಾ ದಳ), ಕಾಂಗ್ರೆಸ್ ಹಾಗೂ ಇತರ ಪಕ್ಷಗಳ ಜತೆ ಸೇರಿ ಮಹಾ ಮೈತ್ರಿಕೂಟ ಸರ್ಕಾರ ರಚಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.