ADVERTISEMENT

Bihar Polls: ಲಾಲು ಮಗ ಸಿಎಂ ಆಗಲು,ರಾಹುಲ್ ಪಿಎಂ ಆಗಲು 2 ಹುದ್ದೆ ಖಾಲಿ ಇಲ್ಲ: ಶಾ

ಪಿಟಿಐ
Published 29 ಅಕ್ಟೋಬರ್ 2025, 9:04 IST
Last Updated 29 ಅಕ್ಟೋಬರ್ 2025, 9:04 IST
<div class="paragraphs"><p>ಅಮಿತ್‌ ಶಾ</p></div>

ಅಮಿತ್‌ ಶಾ

   

ಪಿಟಿಐ ಚಿತ್ರ

ದರ್ಬಾಂಗ್‌: ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್‌ ತಮ್ಮ ಮಗ ತೇಜಸ್ವಿಯವರನ್ನು ಬಿಹಾರದ ಮುಖ್ಯಮಂತ್ರಿಯನ್ನಾಗಿ ಮಾಡಲು ಬಯಸುತ್ತಾರೆ. ಇನ್ನೊಂದೆಡೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ತಮ್ಮ ಪುತ್ರ ರಾಹುಲ್‌ರನ್ನು ದೇಶದ ಪ್ರಧಾನಿ ಮಾಡಬೇಕು ಎಂದುಕೊಳ್ಳುತ್ತಾರೆ. ಆದರೆ, ಎರಡೂ ಹುದ್ದೆಗಳು ಖಾಲಿಯಿಲ್ಲ ಎಂದು ಕೇಂದ್ರ ಸಚಿವ ಅಮಿತ್‌ ಶಾ ಇಂಡಿಯಾ ಮೈತ್ರಿಕೂಟದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ADVERTISEMENT

ಬಿಹಾರದ ದರ್ಬಾಂಗ್‌ ಜಿಲ್ಲೆಯಲ್ಲಿ ರ್‍ಯಾಲಿಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ‘ಮಹಾಘಟಬಂಧನ್ ಎನ್ನುವುದು ‘ಥಗ್‌ ಬಂಧನ್‌’. ಲಾಲು ಪ್ರಸಾದ್ ಮೇವು, ಬಿಟುಮೆನ್ ಮತ್ತು ಭೂಮಿ ಹಗರಣಗಳಲ್ಲಿ ಭಾಗಿಯಾಗಿದ್ದಾರೆ. ಇತ್ತ ಕಾಂಗ್ರೆಸ್ ₹12 ಲಕ್ಷ ಕೋಟಿ  ಭ್ರಷ್ಟಾಚಾರ ಪ್ರಕರಣಗಳಲ್ಲಿ ಭಾಗಿಯಾಗಿದೆ ಎಂದರು.

ಬಿಹಾರದ 8.52 ಕೋಟಿ ಜನರಿಗೆ ಎನ್‌ಡಿಎ ಸರ್ಕಾರ ಉಚಿತ ಪಡಿತರ ನೀಡುತ್ತಿದೆ. ಮಖಾನಾ ಮಂಡಳಿಯನ್ನು ಸ್ಥಾಪಿಸಿ, ಗೃಹಬಳಕೆದಾರರಿಗೆ 125 ಯೂನಿಟ್ ಉಚಿತ ವಿದ್ಯುತ್ ಒದಗಿಸುತ್ತಿದೆ. ದರ್ಬಾಂಗ್‌ ಶೀಘ್ರದಲ್ಲಿ ಮೆಟ್ರೊ ರೈಲನ್ನು ಹೊಂದಲಿದೆ. ಈಗಾಗಲೇ ವಿಮಾನ ನಿಲ್ದಾಣ ನಿರ್ಮಾಣವಾಗಿದೆ. ಏಮ್ಸ್‌ ನಿರ್ಮಾಣದ ಹಂತದಲ್ಲಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.