
ಬಿಜೆಪಿ
ನವದೆಹಲಿ: ಅಭಿವೃದ್ಧಿ ಮತ್ತು ಉತ್ತಮ ಆಡಳಿತದಲ್ಲಿ ನಂಬಿಕೆ ಇಟ್ಟಿರುವ ಬಿಹಾರದ ಮಹಿಳಾ ಮತದಾರರು ಎನ್‌ಡಿಎ ಮೈತ್ರಿಕೂಟಕ್ಕೆ ಮತ ಚಲಾಯಿಸಿದ್ದಾರೆ ಎಂದು ಬಿಜೆಪಿ ಹೇಳಿದೆ.
ಬಿಹಾರದ ಇತಿಹಾಸದಲ್ಲಿ ಮಹಿಳಾ ಮತದಾರರು ದಾಖಲೆ ಪ್ರಮಾಣದಲ್ಲಿ ಮತ ಚಲಾಯಿಸಿದ್ದಾರೆ ಎಂಬ ಚುನಾವಣಾ ಆಯೋಗದ ಹೇಳಿಕೆಗೆ ಪ್ರತಿಕ್ರಿಯಿಸಿರುವ ಬಿಜೆಪಿ ವಕ್ತಾರ ಪ್ರದೀಪ್ ಭಂಡಾರಿ, ‘ಬಿಹಾರದ ಮೊದಲ ಚುನಾವಣೆಗೆ ಹೋಲಿಸಿದೆರೆ ಇದೊಂದು ಐತಿಹಾಸಿಕ ಪರಿವರ್ತನೆಯಾಗಿದೆ’ ಎಂದಿದ್ದಾರೆ
‘ಈ ಚುನಾವಣೆಯಲ್ಲಿ ಶೇ 71.6ರಷ್ಟು ಮಹಿಳೆಯರು ಹಾಗೂ ಶೇ 62.8ರಷ್ಟು ಪುರುಷರು ಮತದಾನದ ಹಕ್ಕು ಚಲಾಯಿಸಿದ್ದಾರೆ. ಮೊದಲ ಹಂತದಲ್ಲಿ ಮಹಿಳೆಯರ ಮತದಾನದ ಪ್ರಮಾಣವು ಪುರಷರಿಗಿಂತ ಶೇ 7.48ರಷ್ಟು ಹೆಚ್ಚಿದ್ದು, ಎರಡನೇ ಹಂತದಲ್ಲಿ ಶೇ 9.93ರಷ್ಟು ಹೆಚ್ಚಾಗಿದೆ’ ಎಂದು ಅವರು ತಿಳಿಸಿದ್ದಾರೆ.
‘ಇದನ್ನು ಬಿಹಾರದ ಮೊದಲ ವಿಧಾನಸಭಾ ಚುನಾವಣೆಗೆ ಹೋಲಿಸಿದರೆ, ಆಗ ಮಹಿಳೆಯರ ಮತದಾನದ ಪ್ರಮಾಣವು ಪುರುಷರಿಗಿಂತ ಶೇ 6ರಷ್ಟು ಕಡಿಮೆಯಿತ್ತು. ಇದು ಐತಿಹಾಸಿಕ ಪರಿವರ್ತನೆಯಾಗಿದೆ’ ಎಂದು ತಿಳಿಸಿದ್ದಾರೆ.
‘ಬಿಹಾರ ಮತದಾನದಲ್ಲಿ ಮಹಿಳೆಯರು ನಿರ್ಣಾಯಕ ಎನಿಸಿದ್ದಾರೆ. ಅಭಿವೃದ್ಧಿ ಮತ್ತು ಉತ್ತಮ ಆಡಳಿತದಲ್ಲಿ ನಂಬಿಕೆ ಇಡುವ 'ಎಂ ಫ್ಯಾಕ್ಟರ್' ನಿಜವಾದ 'ಸ್ವಿಂಗ್ ಫ್ಯಾಕ್ಟರ್’ ಆಗಿ ಹೊರಹೊಮ್ಮಿದೆ’ ಎಂದಿದ್ದಾರೆ.
ಮುಂದುವರಿದು, ರಾಜಕೀಯ ಪಂಡಿತರು ಬಿಹಾರದ ರಾಜಕೀಯವನ್ನು ಜಾತಿ ಕನ್ನಡಿಯ ಮೂಲಕ ನೋಡುವುದನ್ನು ನಿಲ್ಲಿಸಬೇಕು ಎಂದು ಹೇಳಿದ್ದಾರೆ.
ಬಿಹಾರ ವಿಧಾನಸಭೆ ಚುನಾವಣೆಯ ಫಲಿತಾಂಶ ನವೆಂಬರ್ 14ರಂದು ಪ್ರಕಟಗೊಳ್ಳಲಿದೆ. ಬಹುತೇಕ ಮತಗಟ್ಟೆ ಸಮೀಕ್ಷೆಗಳು ಎನ್‌ಡಿಎಗೆ ಬಹುಮತ ನೀಡಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.