ADVERTISEMENT

Bird Flu | ಆಂಧ್ರ ಪ್ರದೇಶದಲ್ಲಿ ಹಕ್ಕಿ ಜ್ವರಕ್ಕೆ 2 ವರ್ಷದ ಹೆಣ್ಣು ಮಗು ಸಾವು

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2025, 13:39 IST
Last Updated 2 ಏಪ್ರಿಲ್ 2025, 13:39 IST
<div class="paragraphs"><p>ಪ್ರಾತಿನಿಧಿಕ ಚಿತ್ರ&nbsp;</p></div>

ಪ್ರಾತಿನಿಧಿಕ ಚಿತ್ರ 

   

ಅಮರಾವತಿ: ಆಂಧ್ರಪ್ರದೇಶದ ಪಲ್ನಾಡು ಜಿಲ್ಲೆಯ ನರಸರಾವ್‌ಪೇಟೆಯಲ್ಲಿ ಎರಡು ವರ್ಷದ ಹೆಣ್ಣು ಮಗುವೊಂದು ಹಕ್ಕಿ ಜ್ವರದಿಂದಾಗಿ ಮೃತಪಟ್ಟಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.

ಮಾರ್ಚ್‌ 15ರಂದು ಮಗು ಮೃತಪಟ್ಟಿತ್ತು. ಬಳಿಕ ಮಗುವಿನ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಯಿತು . ಆಕೆಗೆ ಹಕ್ಕಿ ಜ್ವರ ತಗುಲಿತ್ತು ಎಂದು ಪುಣೆ ಮೂಲದ ರಾಷ್ಟ್ರೀಯ ವೈರಾಲಜಿ ಸಂಸ್ಥೆ (ಎನ್‌ಐವಿ) ಧೃಡಪಡಿಸಿದೆ.

ADVERTISEMENT

ಮಂಗಳಗಿರಿಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ‌ ಮಗು ಮೃತಪಟ್ಟಿದೆ. ‌ಪಲ್ನಾಡು ಜಿಲ್ಲೆಯಲ್ಲಿ ಹಕ್ಕಿ ಜ್ವರ ಪ್ರಕರಣಗಳು ವರದಿಯಾಗಿರಲಿಲ್ಲ. 'ಮಗುವಿ‌ಗೆ ಹೇಗೆ ಸೋಂಕು ತಗುಲಿತು ಎಂಬುದನ್ನು ಸ್ಪಷ್ಟವಾಗಿ ಖಚಿತಪಡಿಸಲಾಗುವುದಿಲ್ಲ' ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಗು ಆಗಾಗ ಹಸಿ ಕೋಳಿ ಮಾಂಸದ ಒಂದು ಅಥವಾ ಎರಡು ತುಂಡುಗಳನ್ನು ತಿನ್ನುತ್ತಿತ್ತು. ಮಗುವಿಗೆ ರೋಗ ಲಕ್ಷಣ ಕಾಣಿಸುವ ಮುಂಚೆಯೂ ಆಕೆ ಒಂದು ತುಂಡು ಹಸಿ ಮಾಂಸ ತಿಂದಿದ್ದಳು. ಆದರೆ ಈ ಅಂಶ ಮಗುವಿನ ಸಾವಿಗೆ ಕಾರಣ ಇರಬಹುದು ಎಂದು ಶಂಕಿಸಬಹುದು ಹೊರತು ಖಚಿತಪಡಿಸಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ಮುನ್ನೆಚ್ಚರಿಕೆಯಾಗಿ ಅಧಿಕಾರಿಗಳು ಮಗುವಿನ ಕುಟುಂಬ ಸದಸ್ಯರನ್ನು ಪರೀಕ್ಷೆಗೆ ಒಳಪಡಿಸಲಾಯಿತು. ಆದರೆ ಯಾವುದೇ ಹಕ್ಕಿಜ್ವರದ ಲಕ್ಷಣಗಳು ವರದಿಯಾಗಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.