ಹಕ್ಕಿ ಜ್ವರ (ಪ್ರಾತಿನಿಧಿಕ ಚಿತ್ರ)
ಗೋರಖ್‌ಪುರ: ಉತ್ತರ ಪ್ರದೇಶದ ಗೋರಖ್‌ಪುರದ ಐದು ಪ್ರದೇಶಗಳಲ್ಲಿ ಹಕ್ಕಿ ಜ್ವರ ಪತ್ತೆಯಾಗಿದೆ.
ಸ್ಥಳೀಯ ಆಡಳಿತವು ನಗರದ ಕೋಳಿ ಮಾರುಕಟ್ಟೆಗಳನ್ನು 21 ದಿನ ಮುಚ್ಚುವಂತೆ ಆದೇಶಿಸಿದೆ. ಸೋಂಕಿತ ಪ್ರದೇಶಗಳಲ್ಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಕ್ಕಿಗಳನ್ನು ಕೊಲ್ಲುವಂತೆ ಸೂಚಿಸಿದೆ.
ಗೋರಖ್‌ಪುರದ ಹಲವು ಮಾರುಕಟ್ಟೆಯಲ್ಲಿ ಮಾದರಿಗಳನ್ನು ಸಂಗ್ರಹಿಸಿ ಭೋಪಾಲ್‌ನಲ್ಲಿರುವ ರಾಷ್ಟ್ರೀಯ ಹೈ ಸೆಕ್ಯುರಿಟಿ ಪ್ರಾಣಿ ರೋಗಗಳ ಸಂಸ್ಥೆ (NIHSAD)ಗೆ ಕಳುಹಿಸಲಾಗಿತ್ತು. ಮಾದರಿಗಳಲ್ಲಿ H5N1 ಮತ್ತು H9N2 ಸೋಂಕು ಇರುವುದು ದೃಢಪಟ್ಟಿದೆ.
ಕೇಂದ್ರ ಸರ್ಕಾರದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಸಲುವಾಗಿ ಸೋಂಕಿತ ವಲಯಗಳ ಒಂದು ಕಿಲೋಮೀಟರ್ ವ್ಯಾಪ್ತಿಯಲ್ಲಿರುವ ಕೋಳಿಗಳನ್ನು ಹತ್ಯೆ ಮಾಡುವ ಕಾರ್ಯ ಆರಂಭವಾಗಿದೆ ಎಂದು ಹೆಚ್ಚುವರಿ ಪುರಸಭೆ ಆಯುಕ್ತ ನಿರಂಕರ್ ಸಿಂಗ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.