ನವದೆಹಲಿ: ಕೊರೊನಾ ಸೋಂಕಿನ ನಡುವೆಯೂ ಬಿಜೆಪಿ ಕಾರ್ಯಕರ್ತರು ಮತ್ತು ಮುಖಂಡರು ಪರಿಹಾರ ಕಾರ್ಯಗಳನ್ನು ಕೈಗೊಂಡಿದ್ದರೆ, ವಿರೋಧ ಪಕ್ಷದವರು ಕ್ವಾರಂಟೈನ್‌ಗೆ ಒಳಗಾಗಿದ್ದಾರೆ ಎಂದು ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಭಾನುವಾರ ವ್ಯಂಗ್ಯವಾಡಿದರು.
ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಏಳನೇ ವರ್ಷಾಚರಣೆ ಸಂದರ್ಭದಲ್ಲಿ ವರ್ಚುವಲ್ ಸಭೆ ಮೂಲಕ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ಸಂದರ್ಭವನ್ನು ಪಕ್ಷದ ಎಲ್ಲ ಸಂಸದರು, ಮಂತ್ರಿಗಳು ಮತ್ತು ಶಾಸಕರು ಕೋವಿಡ್ ಮತ್ತು ಲಾಕ್‌ಡೌನ್ ಮಾರ್ಗಸೂಚಿಗಳನ್ನು ಪಾಲಿಸಿಕೊಂಡು ಕನಿಷ್ಠ ಎರಡು ಹಳ್ಳಿಗಳಲ್ಲಿ ಜನರಿಗೆ ಸೇವೆ ಸಲ್ಲಿಸಲಿದ್ದಾರೆ ಎಂದು ಹೇಳಿದರು.
ಪಿಡುಗಿನ ಸಂದರ್ಭದಲ್ಲಿಯೂ ಬಿಜೆಪಿ ಕಾರ್ಯಕರ್ತರು ಜನರೊಂದಿಗೆ ಸೇವೆ ಸಲ್ಲಿಸುತ್ತಾರೆಯೇ ಹೊರತು, ವಿರೋಧ ಪಕ್ಷದ ನಾಯಕರಂತೆ ವರ್ಚುವಲ್ ಪತ್ರಿಕಾಗೋಷ್ಠಿಗೆ ಸೀಮಿತವಾಗಿರುವುದಿಲ್ಲ ಎಂದರು.
ಒಂದು ಲಕ್ಷ ಗ್ರಾಮಗಳು ಮತ್ತು ಕುಗ್ರಾಮಗಳಲ್ಲಿ ಪಕ್ಷದ ಕಾರ್ಯಕರ್ತರು ಅಗತ್ಯವಿರುವವರಿಗೆ ಸೇವೆ ಸಲ್ಲಿಸುತ್ತಿದ್ದಾರೆ ಎಂದು ನಡ್ಡಾ ಹೇಳಿದರು.
ಈಗ ಕೋವಿಡ್ ಲಸಿಕೆ ಬಗ್ಗೆ ಮಾತನಾಡುತ್ತಿರುವ ವಿರೋಧ ಪಕ್ಷದವರು ಈ ಹಿಂದೆ ಲಸಿಕೆಗಳ ವಿರುದ್ಧ ಜನರಲ್ಲಿ ಅನುಮಾನ ಹುಟ್ಟು ಹಾಕಿದ್ದರು ಅವರು ಟೀಕಿಸಿದರು.
ಕೋವಿಡ್ ಕಾರಣದಿಂದ ಬಿಜೆಪಿ ಕಾರ್ಯಕರ್ತರು ವಾರ್ಷಿಕೋತ್ಸವವನ್ನು ದೇಶದಾದ್ಯಂತ ‘ಸೇವಾ ದಿವಸ್’ ಆಗಿ ಆಚರಿಸುತ್ತಿದ್ದಾರೆ.
ಇದನ್ನೂ ಓದಿ... ಮೋದಿ ಸರ್ಕಾರಕ್ಕೆ 7 ವರ್ಷ: ಮನ್ ಕಿ ಬಾತ್ನಲ್ಲಿ ಗುಣಗಾನ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.