ADVERTISEMENT

ಗುಜರಾತ್‌, ಜಾರ್ಖಾಂಡ್‌ ವಿಧಾನಸಭೆ ಉಪ ಚುನಾವಣೆ: ಬಿಜೆಪಿ, ಕಾಂಗ್ರೆಸ್‌ಗೆ ಜಯ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2018, 19:23 IST
Last Updated 23 ಡಿಸೆಂಬರ್ 2018, 19:23 IST

ನವದೆಹಲಿ: ಗುಜರಾತ್‌ ಹಾಗೂ ಜಾರ್ಖಂಡ್‌ ವಿಧಾನಸಭಾ ಉಪ ಚುನಾವಣೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ಅಭ್ಯರ್ಥಿಗಳು ಕ್ರಮವಾಗಿ ತಲಾ ಒಂದು ಸ್ಥಾನದಲ್ಲಿ ಜಯಗಳಿಸಿದ್ದಾರೆ.

ಗುಜರಾತ್‌ನ ರಾಜಕೋಟ್‌ ಜಿಲ್ಲೆಯ ಜಾಸ್ದನ್‌ ಕ್ಷೇತ್ರದಲ್ಲಿ ಬಿಜೆಪಿಯಕುಂವರ್ಜಿ ಬವಾಲಿಯಾ ಹಾಗೂ ಜಾರ್ಖಂಡ್‌ನಕೊಲೆಬಿರಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ವಿಕ್ಸಾಲ್‌ ಕೊಂಗಡಿ ಗೆದ್ದಿದ್ದಾರೆ.

ಈ ಗೆಲುವಿನೊಂದಿಗೆ 182 ಸದಸ್ಯ ಬಲದ ಗುಜರಾತ್‌ ವಿಧಾನಸಭೆಯಲ್ಲಿ ಬಿಜೆಪಿ ಸದಸ್ಯ ಬಲ 100ಕ್ಕೇರಿದೆ.

ADVERTISEMENT

ಈ ಮೊದಲು ಕಾಂಗ್ರೆಸ್‌ ಶಾಸಕರಾಗಿದ್ದ ಕೋಳಿ ಸಮುದಾಯದ ನಾಯಕ ಕುಂವರ್ಜಿ ಬವಾಲಿಯಾ ಇತ್ತೀಚೆಗೆ ರಾಜೀನಾಮೆ ನೀಡಿ ಬಿಜೆಪಿ ಸೇರಿ, ಸಚಿವರಾಗಿದ್ದರು.

ಈ ಉಪ ಚುನಾವಣೆಯಲ್ಲಿ ಅವರು ಕಾಂಗ್ರೆಸ್‌ ಅಭ್ಯರ್ಥಿ ಅವ್ಸಾರ್‌ ನಕಿಯಾ ಅವರನ್ನು 19,979 ಮತಗಳ ಅಂತರದಿಂದ ಸೋಲಿಸಿದ್ದಾರೆ.

ಜಾರ್ಖಂಡ್‌ನಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಕೊಂಗಡಿ ಅವರು ಬಿಜೆಪಿ ಅಭ್ಯರ್ಥಿ ಬಸಂತ್‌ ಸೊರೇನ್‌ ಅವರನ್ನು 9,658 ಮತಗಳಿಂದ ಸೋಲಿಸಿದ್ದಾರೆ.

ಕೊಲೆ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾಗಿದ್ದರಿಂದ ಕೊಲೆಬಿರಾ ಕ್ಷೇತ್ರದ ಹಾಲಿ ಶಾಸಕ ಇನೋಕ್‌ ಎಕ್ಕಾ ಅನರ್ಹಗೊಂಡ ಕಾರಣ ಈ ಕ್ಷೇತ್ರಕ್ಕೆ ಉಪ ಚುನಾವಣೆ ನಡೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.