ADVERTISEMENT

ಭಾರತೀಯ ಮುಸ್ಲಿಮರ ಮೇಲೆ ದ್ವೇಷ, ಯುದ್ಧ ಸಾರಿರುವ ಬಿಜೆಪಿ: ಓವೈಸಿ ಆರೋಪ

ಪಿಟಿಐ
Published 30 ಏಪ್ರಿಲ್ 2022, 2:02 IST
Last Updated 30 ಏಪ್ರಿಲ್ 2022, 2:02 IST
ಅಸಾದುದ್ದೀನ್ ಓವೈಸಿ – ಐಎಎನ್‌ಎಸ್ ಚಿತ್ರ
ಅಸಾದುದ್ದೀನ್ ಓವೈಸಿ – ಐಎಎನ್‌ಎಸ್ ಚಿತ್ರ   

ಹೈದರಾಬಾದ್: ಬಿಜೆಪಿಯು ದೇಶದಲ್ಲಿ ಮುಸ್ಲಿಮರ ವಿರುದ್ಧ ದ್ವೇಷ ಹರಡುತ್ತಿದೆ. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮುಸ್ಲಿಮರ ಮೇಲೆ ಯುದ್ಧ ಸಾರಿದೆ ಎಂದು ಎಐಎಂಐಎಂ ಅಧ್ಯಕ್ಷ, ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಆರೋಪಿಸಿದ್ದಾರೆ.

ಇಲ್ಲಿನ ಮೆಕ್ಕಾ ಮಸೀದಿಯ ‘ಜಲ್ಸೆ ಯಾಮ್–ಉಲ್–ಕುರಾನ್’ ಆವರಣದಲ್ಲಿ ಜನರನ್ನು ಉದ್ದೇಶಿಸಿ ಅವರು ಮಾತನಾಡಿದರು. ಇದೇ ವೇಳೆ, ದ್ವೇಷ ಹರಡುವ ಕೃತ್ಯಗಳನ್ನು ನಿಲ್ಲಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಓವೈಸಿ ಆಗ್ರಹಿಸಿದ್ದಾರೆ.

‘ನಮ್ಮ ದೇಶದಲ್ಲಿ ಮುಸ್ಲಿಮರ ವಿರುದ್ಧ ಬಿಜೆಪಿ ದ್ವೇಷದ ಬಿರುಗಾಳಿ ಎಬ್ಬಿಸಿದೆ. ಮುಸ್ಲಿಮರು ತಾಳ್ಮೆ ಮತ್ತು ಧೈರ್ಯ ಕಳೆದುಕೊಳ್ಳಬಾರದು. ಸಂವಿಧಾನದ ಮಿತಿಯಲ್ಲೇ ಈ ದಬ್ಬಾಳಿಕೆಯ ವಿರುದ್ಧ ಹೋರಾಡಿ’ ಎಂದು ಅವರು ಹೇಳಿದ್ದಾರೆ.

‘ಬಿಜೆಪಿಯು ಮುಸ್ಲಿಮರ ಮೇಲೆ ಅತಿಯಾದ ಒತ್ತಡ ಹೇರಲು ಬಯಸುತ್ತಿದೆ. ಅವರನ್ನು ಅತಿಯಾಗಿ ನೋಯಿಸುವ ಮೂಲಕ ಅವರು ಆಯುಧ ಹಿಡಿಯುವಂತೆ ಮಾಡಲು ಪ್ರೇರೇಪಿಸುತ್ತಿದೆ’ ಎಂದು ಓವೈಸಿ ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.