ADVERTISEMENT

ದೇಶದ ಪ್ರಜಾಪ್ರಭುತ್ವ ಪ್ರಕ್ರಿಯೆ,BJP ಚುನಾವಣಾ ಪ್ರಚಾರ ವೀಕ್ಷಿಸಿದ ವಿದೇಶಿ ನಿಯೋಗ

ಪಿಟಿಐ
Published 2 ನವೆಂಬರ್ 2025, 13:07 IST
Last Updated 2 ನವೆಂಬರ್ 2025, 13:07 IST
   

ನವದೆಹಲಿ: ಭಾರತದ ಪ್ರಜಾಪ್ರಭುತ್ವ ಪ್ರಕ್ರಿಯೆ ಹಾಗೂ ಬಿಜೆಪಿಯ ಚುನಾವಣಾ ಪ್ರಚಾರ ವೀಕ್ಷಿಸಲು ವಿದೇಶಿ ರಾಜತಾಂತ್ರಿಕರ ನಿಯೋಗವು ಬಿಹಾರಕ್ಕೆ ಭಾನುವಾರ ಭೇಟಿ ನೀಡಿತು.

ಅಮೆರಿಕ, ಜಪಾನ್, ಇಂಡೊನೇಷ್ಯಾ, ಡೆನ್ಮಾರ್ಕ್‌, ಆಸ್ಟ್ರೇಲಿಯಾ, ಭೂತಾನ್ ಮತ್ತು ದಕ್ಷಿಣ ಆಫ್ರಿಕಾದ ರಾಜತಾಂತ್ರಿಕರು ಈ ನಿಯೋಗದಲ್ಲಿದ್ದಾರೆ.

‘ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಆರಂಭಿಸಿದ ‘ಬಿಜೆಪಿಯನ್ನು ಅರಿಯಿರಿ’ ಎಂಬ ಕಾರ್ಯಕ್ರಮದಡಿ ಪಕ್ಷದ ಕಾರ್ಯವೈಖರಿ, ವರ್ಚಸ್ಸು, ಸಂಘಟನಾ ಶಕ್ತಿಯ ಜೊತೆಗೆ ಭಾರತದ ಚುನಾವಣಾ ಪ್ರಕ್ರಿಯೆಯನ್ನು ವಿದೇಶಿ ನಿಯೋಗಕ್ಕೆ ಪರಿಚಯಿಸಲಾಗಿದೆ’ ಎಂದು ಬಿಜೆಪಿಯ ವಿದೇಶಾಂಗ ವ್ಯವಹಾರ ಉಸ್ತುವಾರಿ ವಿಜಯ್ ಚೌಥಾಯಿವಾಲೆ ತಿಳಿಸಿದರು.

ADVERTISEMENT

‘ಬಿಹಾರದಲ್ಲಿ ಎರಡು ದಿನ ಪ್ರವಾಸ ಮಾಡಲಿರುವ ನಿಯೋಗವು ಪಕ್ಷದ ಹಿರಿಯ ನಾಯಕರೊಂದಿಗೆ ಸಂವಹನ ನಡೆಸಲಿದೆ. ಪ್ರಮುಖ ಕ್ಷೇತ್ರಗಳಿಗೆ ಭೇಟಿ ನೀಡುವ ಜೊತೆಗೆ ಪ್ರಚಾರವನ್ನು ಗಮನಿಸಲಿದೆ’ ಎಂದಿದ್ದಾರೆ.

ಈ ಹಿಂದೆಯೂ, ಇದೇ ರೀತಿಯ ನಿಯೋಗಗಳು ಗುಜರಾತ್, ಹಿಮಾಚಲ ಪ್ರದೇಶ, ರಾಜಸ್ಥಾನ ವಿಧಾನಸಭಾ ಚುನಾವಣೆ ಸಮಯದಲ್ಲಿ ಬಿಜೆಪಿ ಆಹ್ವಾನದ ಮೇರೆಗೆ ಭೇಟಿ ನೀಡಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.