ರಾಹುಲ್ ಗಾಂಧಿ
–ಪಿಟಿಐ ಚಿತ್ರ
ನವದೆಹಲಿ: ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ತಮ್ಮ ಕ್ಷೇತ್ರಕ್ಕಿಂತ ವಿಯೆಟ್ನಾಂನಲ್ಲಿ ಹೆಚ್ಚು ಸಮಯ ಕಳೆಯುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ರಾಹುಲ್ ಗಾಂಧಿಗೆ ಆ ದೇಶದ ಬಗ್ಗೆ ಯಾಕಿಷ್ಟು ಅಸಾಧಾರಣ ಪ್ರೀತಿ ಎನ್ನುವುದನ್ನು ಅವರೇ ಸ್ಪಷ್ಟಪಡಿಸಬೇಕು ಎಂದು ಬಿಜೆಪಿ ಆಗ್ರಹಿಸಿದೆ.
‘ರಾಹುಲ್ ಗಾಂಧಿ ಎಲ್ಲಿದ್ದಾರೆ? ಅವರು ವಿಯೆಟ್ನಾಂಗೆ ಹೋಗಿದ್ದಾರೆ ಎಂಬುದನ್ನು ನಾನು ಕೇಳಿದೆ’ ಎಂದು ಬಿಜೆಪಿ ನಾಯಕ, ಕೇಂದ್ರದ ಮಾಜಿ ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.
ದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಶೇ 4 ರಷ್ಟು ಮೀಸಲಾತಿ ಕಲ್ಪಿಸುವ ಕರ್ನಾಟಕ ಸರ್ಕಾರದ ನಿರ್ಧಾರವನ್ನೂ ಅವರು ಟೀಕಿಸಿದರು.
‘ಹೊಸ ವರ್ಷಾಚರಣೆ ವೇಳೆಯೂ ರಾಹುಲ್ ಗಾಂಧಿ ವಿಯೆಟ್ನಾಂಗೆ ತೆರಳಿ 22 ದಿನ ತಂಗಿದ್ದರು. ಅವರು ತಮ್ಮ ಲೋಕಸಭಾ ಕ್ಷೇತ್ರದಲ್ಲಿಯೂ ಅಷ್ಟು ದಿನ ಇರುವುದಿಲ್ಲವಿಯೆಟ್ನಾಂ ಬಗ್ಗೆ ಏಕಾಏಕಿ ಪ್ರೀತಿ ಬರಲು ಕಾರಣ ಏನು’ ಎಂದು ಅವರು ಪ್ರಶ್ನಿಸಿದ್ದಾರೆ.
‘ರಾಹುಲ್ ಗಾಂಧಿ ವಿರೋಧ ಪಕ್ಷದ ನಾಯಕರು. ಅವರು ಭಾರತಲ್ಲಿ ಲಭ್ಯರಿರಬೇಕು’ ಎಂದು ವ್ಯಂಗ್ಯವಾಡಿದರು.
‘ವಿಯೆಟ್ನಾಂ ಬಗ್ಗೆ ಅವರಿಗೆ ಇರುವ ಅಪರಿಮಿತ ಪ್ರೀತಿಯ ಬಗ್ಗೆ ರಾಹುಲ್ ಗಾಂಧಿಯೇ ಉತ್ತರಿಸಬೇಕು. ಆ ದೇಶಕ್ಕೆ ಅವರ ಪದೇ ಪದೇ ಭೇಟಿ ಕುತೂಹಲಕಾರಿ’ ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.