ADVERTISEMENT

ಯುವಕರಿಂದ ಪಕೋಡ ಮಾರಿಸುವ ಪಕ್ಷ ಬಿಜೆಪಿ: ಮಾಯಾವತಿ ವಾಗ್ದಾಳಿ

ಪಿಟಿಐ
Published 27 ಜನವರಿ 2022, 16:59 IST
Last Updated 27 ಜನವರಿ 2022, 16:59 IST
ಮಾಯಾವತಿ
ಮಾಯಾವತಿ    

ಲಖನೌ: ಬಿಜೆಪಿಯು ಯುವಕರಿಂದ ‘ಪಕೋಡಾ’ ಮಾರಾಟ ಮಾಡಿಸುವ ಸಂಕುಚಿತ ಮನೋಭಾವವನ್ನು ಹೊಂದಿದೆ ಎಂದು ಬಹುಜನ ಸಮಾಜ ಪಕ್ಷದ ವರಿಷ್ಠೆ ಮಾಯಾವತಿ ಗುರುವಾರ ವ್ಯಂಗ್ಯವಾಡಿದ್ದಾರೆ.

‘ಉತ್ತರ ಪ್ರದೇಶ ಶಿಕ್ಷಕರ ಅರ್ಹತಾ ಪರೀಕ್ಷೆ (ಯುಪಿಟಿಟಿ) ಮತ್ತು ಈಗ ರೈಲ್ವೆ ನೇಮಕಾತಿ ಮಂಡಳಿ-ಎನ್‌ಟಿಪಿಸಿ ನೇಮಕಾತಿ ಅಕ್ರಮದ ಕುರಿತು ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ. ಇದು ಸರ್ಕಾರಗಳ ವೈಫಲ್ಯಕ್ಕೆ ಪುರಾವೆಯಾಗಿದೆ. ಪ್ರತಿಭಟಿಸಿದ ಬಡವರು ಮತ್ತು ನಿರುದ್ಯೋಗಿ ಯುವಕರನ್ನು ಥಳಿಸುವುದು ಮತ್ತು ಅವರ ಭವಿಷ್ಯದ ಜೊತೆ ಆಟವಾಡುವುದು ನ್ಯಾಯಸಮ್ಮತವಲ್ಲ’ ಎಂದು ಅವರು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ

‘ಸರಕಾರದ ತಪ್ಪು ನೀತಿಗಳಿಂದಾಗಿ ಬಡತನ ಮತ್ತು ನಿರುದ್ಯೋಗ ಏರುತ್ತಿದೆ. ಸರ್ಕಾರಿ ಉದ್ಯೋಗಗಳು ಮತ್ತು ಮೀಸಲಾತಿ ಸೌಲಭ್ಯಗಳು ಅವರಿಗೆ ಅಲಭ್ಯವಾಗಿವೆ. ಪರಿಸ್ಥಿತಿ ಹೀಗಿರುವಾಗ, ಸಣ್ಣ ಪುಟ್ಟ ಸರ್ಕಾರಿ ಕೆಲಸಗಳಿಗೂ ವರ್ಷಗಟ್ಟಲೆ ಪರೀಕ್ಷೆ ನಡೆಸದೇ ಇರುವುದು ಅನ್ಯಾಯವೇ ಸರಿ. ಯುವಕರು ‘ಪಕೋಡಾ’ ಮಾರುವಂತೆ ಮಾಡುವ ಸಂಕುಚಿತ ಮನೋಭಾವವನ್ನು ಬಿಜೆಪಿ ಬದಲಾಯಿಸಿಕೊಳ್ಳಬೇಕು’ ಎಂದು ಅವರು ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.