ADVERTISEMENT

ಸೋನಾಲಿ ಫೋಗಾಟ್‌ ಸಾವು: ಶವಪರೀಕ್ಷೆಗೆ ಸಂಬಂಧಿಗಳಿಂದ ಷರತ್ತುಬದ್ಧ ಒಪ್ಪಿಗೆ

ಪಿಟಿಐ
Published 25 ಆಗಸ್ಟ್ 2022, 4:59 IST
Last Updated 25 ಆಗಸ್ಟ್ 2022, 4:59 IST
ಬಿಜೆಪಿ ನಾಯಕಿ ಸೋನಾಲಿ ಫೋಗಾಟ್‌
ಬಿಜೆಪಿ ನಾಯಕಿ ಸೋನಾಲಿ ಫೋಗಾಟ್‌   

ಪಣಜಿ: ಎರಡು ದಿನಗಳ ಹಿಂದೆ ಮೃತಪಟ್ಟ ಬಿಜೆಪಿ ನಾಯಕಿ ಸೋನಾಲಿ ಫೋಗಾಟ್‌ ಅವರ ಶವಪರೀಕ್ಷೆಗೆ ಸಂಬಂಧಿಗಳಿಂದ ಷರತ್ತುಬದ್ಧ ಒಪ್ಪಿಗೆ ನೀಡಿದ್ದಾರೆ. ಶವಪರೀಕ್ಷೆಯ ಸಂಪೂರ್ಣ ದೃಶ್ಯವನ್ನು ಚಿತ್ರೀಕರಿಸಬೇಕು ಎಂದು ಷರತ್ತು ವಿಧಿಸಲಾಗಿದೆ.

ಶವಪರೀಕ್ಷೆ ವರದಿ ಸಿಕ್ಕಿದ ಬಳಿಕ ಎಫ್‌ಐಆರ್‌ ದಾಖಲಿಸುವುದಾಗಿ ಪೊಲೀಸರು ಭರವಸೆ ನೀಡಿದ್ದಾರೆ. ವಿಡಿಯೊ ಚಿತ್ರೀಕರಿಸಬೇಕು ಎಂಬ ಷರತ್ತಿನೊಂದಿಗೆ ಶವಪರೀಕ್ಷೆ ನಡೆಸಲು ಒಪ್ಪಿಗೆ ನೀಡಿದ್ದೇವೆ ಎಂದು ಗುರುವಾರ ಬೆಳಗ್ಗೆ ಸೋನಾಲಿ ಅವರ ಬಂಧು ಮೋಹಿಂದರ್‌ ಫೋಗಾಟ್‌ ತಿಳಿಸಿದ್ದಾರೆ.

ಗೋವಾದ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಶವಪರೀಕ್ಷೆ ನಡೆಸಲು ಈ ಮೊದಲು ಸಮಯ ನಿಗದಿ ಪಡಿಸಲಾಗಿತ್ತು. ಆದರೆ ಸೋನಾಲಿ ಅವರ ಸಹೋದರ ರಿಂಕು ಧಾಕ ತನ್ನ ಸಹೋದರಿಯನ್ನು ಆಕೆಯ ಇಬ್ಬರು ಸಿಬ್ಬಂದಿಯೇ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ ಬಳಿಕ ಶವಪರೀಕ್ಷೆಯನ್ನು ತಡೆ ಹಿಡಿಯಲಾಗಿದೆ.

ADVERTISEMENT

ಗೋವಾ ಪೊಲೀಸರು ತಮ್ಮ ಸಹೋದರಿಯ ಇಬ್ಬರು ಸಿಬ್ಬಂದಿಗಳ ಮೇಲೆ ಎಫ್‌ಐಆರ್‌ ದಾಖಲಿಸಿದ ಬಳಿಕ ಆಕೆಯ ಶವಪರೀಕ್ಷೆಗೆ ಒಪ್ಪಿಗೆ ನೀಡುವುದಾಗಿ ರಿಂಕು ಧಾಕ ಪಟ್ಟುಹಿಡಿದಿದ್ದರು.

ನಟಿ, ಬಿಗ್‌ಬಾಸ್‌ ಖ್ಯಾತಿಯ ಸೋನಾಲಿ ಅವರು ಗೋವಾ ಪ್ರವಾಸದಲ್ಲಿದ್ದ ವೇಳೆ ಹೃದಯಾಘಾತದಿಂದ ಮೃತಪಟ್ಟಿದ್ದರು. ಸೋಮವಾರ ರಾತ್ರಿ 7ರಿಂದ 8ರ ಸುಮಾರಿಗೆ ಸೋನಾಲಿ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ನಾಲ್ಕು ಫೋಟೊಗಳನ್ನು ಹಾಗೂ ಎರಡು ವಿಡಿಯೊಗಳನ್ನು ಪೋಸ್ಟ್‌ ಮಾಡಿದ್ದರು.

2019ರ ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಅಧಮ್‌ಪುರ ಕ್ಷೇತ್ರದಿಂದ ಸೋನಾಲಿ ಅವರು ಸ್ಪರ್ಧಿಸಿ, ಸೋಲುಕಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.