ADVERTISEMENT

ಮುಸ್ಲಿಂ ಮಹಿಳೆಯರಿಗೆ ಕಂಬಳಿ ನೀಡಲು ನಿರಾಕರಿಸಿದ ಬಿಜೆಪಿ ನಾಯಕ: ಯಾಕೆ ಗೊತ್ತೇ?

ಏಜೆನ್ಸೀಸ್
Published 23 ಫೆಬ್ರುವರಿ 2026, 7:58 IST
Last Updated 23 ಫೆಬ್ರುವರಿ 2026, 7:58 IST
<div class="paragraphs"><p>ಕಂಬಳಿ ವಿತರಣಾ ಕಾರ್ಯಕ್ರಮದಲ್ಲಿ&nbsp;ಭಾಗವಹಿಸಿದ್ದ&nbsp;ಬಿಜೆಪಿ ನಾಯಕ ಸುಖ್‌ಬೀರ್ ಸಿಂಗ್</p></div>

ಕಂಬಳಿ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬಿಜೆಪಿ ನಾಯಕ ಸುಖ್‌ಬೀರ್ ಸಿಂಗ್

   

Credit: Screengrab from X.

ಜೈಪುರ: ಪ್ರಧಾನಿ ನರೇಂದ್ರ ಮೋದಿ ಅವರನ್ನು ನಿಂದಿಸುವವರಿಗೆ ಸವಲತ್ತುಗಳನ್ನು ಪಡೆಯುವ ಹಕ್ಕಿಲ್ಲ ಎಂದು ಬಿಜೆಪಿ ಮಾಜಿ ಸಂಸದ ಸುಖ್‌ಬೀರ್ ಸಿಂಗ್ ಜೌನಪುರಿಯಾ ಹೇಳಿದ್ದಾರೆ.

ADVERTISEMENT

ಸುಖ್‌ಬೀರ್ ಸಿಂಗ್ ಜೌನಪುರಿಯಾ ಅವರು ಮುಸ್ಲಿಂ ಮಹಿಳೆಯರಿಗೆ ಕಂಬಳಿ ನೀಡಲು ನಿರಾಕರಿಸಿದ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಟೀಕೆ ವ್ಯಕ್ತವಾಗಿದೆ.

2014ರಿಂದ 2024ರವರೆಗೆ ಸಂಸದರಾಗಿದ್ದ ಸಿಂಗ್, ರಾಜಸ್ಥಾನದ ಟೋಂಕ್ ಜಿಲ್ಲೆಯಲ್ಲಿ ನಡೆದ ಕಂಬಳಿ ವಿತರಣಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಕಂಬಳಿ ವಿತರಿಸುತ್ತಿದ್ದ ವೇಳೆ ಮುಸ್ಸಿಂ ಮಹಿಳೆಯರ ಹೆಸರುಗಳನ್ನು ಕೇಳಿ... ಪ್ರಧಾನಿ ಮೋದಿಯವರನ್ನು ನಿಂದಿಸುವವರಿಗೆ ಕಂಬಳಿ ಪಡೆಯುವ ಹಕ್ಕಿಲ್ಲ’ ಎಂದಿದ್ದಾರೆ.

ರಾಜಸ್ಥಾನ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಟಿಕಾ ರಾಮ್‌ ಜುಲ್ಲಿ ಅವರು ಸುಖ್‌ಬೀರ್ ಸಿಂಗ್ ನಡೆಯನ್ನು ಖಂಡಿಸಿದ್ದು, ‘ಬಡ ಮಹಿಳೆಯ ಧರ್ಮವನ್ನು ಕೇಳಿ ಕಂಬಳಿಯನ್ನು ಹಿಂದಕ್ಕೆ ಪಡೆದಿರುವುದು ಅತ್ಯಂತ ಖಂಡನೀಯ. ಇದು ಮಹಿಳೆಯರಿಗೆ ಮಾಡಿದ ಅವಮಾನ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.