ADVERTISEMENT

ಫೇಶಿಯಲ್ ಮಾಡುವ, ಕೂದಲಿಗೆ ಬಣ್ಣ ಹಚ್ಚುವ ಮಾಯಾ ಮೋದಿಯನ್ನು ಪ್ರಶ್ನಿಸುವುದೇತಕೆ?

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2019, 12:44 IST
Last Updated 19 ಮಾರ್ಚ್ 2019, 12:44 IST
   

ನವದೆಹಲಿ: ಮಾಯಾವತಿ ದಿನಾ ಫೇಶಿಯಲ್ ಮಾಡಿಸಿಕೊಳ್ಳುತ್ತಾರೆ. ಅಂಥವರು ನಮ್ಮ ನಾಯಕನನ್ನು ಶೋಕಿವಾಲಾ ಎಂದು ಹೇಳುತ್ತಾರೆ.ವಿಧವಿಧದ ಬಟ್ಟೆ ತೊಡುವುದು ಶೋಕಿ ಅಲ್ಲ, ಕೂದಲು ಬೆಳ್ಳಗಾಗಿದ್ದರೂ ಅದಕ್ಕೆ ಬಣ್ಣ ಹಚ್ಚಿ ತನ್ನನ್ನು ತಾನು ಯುವತಿ ಅಂದುಕೊಳ್ಳುವುದಿದೆಯಲ್ಲಾ...ಶೋಕಿ ಅಂದರೆ ಅದು.ಅವರಿಗೆ 60 ವರ್ಷ ಆಯಿತು ಆದರೂ ಕೂದಲು ಕಪ್ಪಗಿದೆ ಎಂದು ಉತ್ತರ ಪ್ರದೇಶದ ಬಿಜೆಪಿ ಶಾಸಕ ಸುರೇಂದ್ರ ನಾರಾಯಣ್ ಸಿಂಗ್ ಹೇಳಿದ್ದಾರೆ.

ಮಾಯಾವತಿ ಅವರ ಟ್ವೀಟ್ ಬಗ್ಗೆ ಎಎನ್‍ಐ ಸುದ್ದಿ ಸಂಸ್ಥೆಗೆ ಪ್ರತಿಕ್ರಿಯೆ ನೀಡಿದ ಸಿಂಗ್, ಬಿಎಸ್‌ಪಿ ಮುಖ್ಯಸ್ಥೆಗೆ ಮೋದಿಯನ್ನು ಟೀಕಿಸುವ ಯಾವ ಹಕ್ಕು ಇಲ್ಲ ಎಂದು ಹೇಳಿದ್ದಾರೆ.

ಮಾಯಾ ಟ್ವೀಟಿಸಿದ್ದು ಏನು?

ADVERTISEMENT

ಪ್ರಧಾನಿ ಮೋದಿಯವರ ಹೆಸರನ್ನು ಉಲ್ಲೇಖಿಸದೆಯೇ ಮಾಯಾವತಿ ಅವರು ಮಂಗಳವಾರ ಟ್ವೀಟ್‍ ಮಾಡಿದ್ದರು. ಐಷಾರಾಮಿ ಜೀವನ ನಡೆಸಿದ್ದ ವ್ಯತ್ತಿಯೊಬ್ಬರು ಕಳೆದ ಲೋಕಸಭಾ ಚುನಾವಣೆ ವೇಳೆ ತಾನೊಬ್ಬ ಚಾಯ್‍ವಾಲಾ ಎಂದು ಹೇಳಿದ್ದರು.ಇದೀಗ ಅವರು ತಮ್ಮನ್ನು ಚೌಕೀದಾರ್ ಎಂದು ಹೇಳುತ್ತಿದ್ದಾರೆ ಎಂದು ಮಾಯ ಟ್ವೀಟಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.