
ನಿತಿನ್ ಗಡ್ಕರಿ
ನಾಗ್ಪುರ: ‘ಬಿಜೆಪಿ ಮುಸ್ಲಿಂ ವಿರೋಧಿಯಲ್ಲ. ಬಿಜೆಪಿಯ ಸಿದ್ಧಾಂತ ಎಲ್ಲರಿಗಾಗಿ ಕೆಲಸ ಮಾಡುವುದನ್ನು ಕಲಿಸುತ್ತದೆ’ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದರು.
‘ಜ.15ರಂದು ನಡೆಯಲಿರುವ ನಾಗ್ಪುರ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ–ಶಿವ ಸೇನಾ ಮೈತ್ರಿ ಜಯಗಳಿಸಿದರೆ ಜನರ ಎಲ್ಲ ಕನಸುಗಳು ನನಸಾಗುತ್ತವೆ’ ಎಂದು ಅವರು ಇಲ್ಲಿ ನಡೆದ ಚುನಾವಣಾ ರ್‍ಯಾಲಿಯಲ್ಲಿ ಹೇಳಿದರು.
ಮೂರು ಸಾರ್ವಜನಿಕ ಸಭೆಗಳನ್ನು ನಡೆಸಿದ ಗಡ್ಕರಿ, ‘ಬಿಜೆಪಿ ಮುಸ್ಲಿಂ ವಿರೋಧಿ ಎಂದು ವಿರೋಧ ಪಕ್ಷಗಳು ಹರಡುತ್ತಿರುವ ವದಂತಿಗಳಿಗೆ ಕಿವಿಗೊಡಬೇಡಿ. ನಾವು ಭಯೋತ್ಪಾದನೆ ಮತ್ತು ಪಾಕಿಸ್ತಾನವನ್ನು ಮಾತ್ರ ವಿರೋಧಿಸುತ್ತೇವೆ. ಈ ದೇಶಕ್ಕಾಗಿ ತ್ಯಾಗ ಮಾಡಿರುವ ಮುಸ್ಲಿಮರು, ನಮಗೆ ಹಿಂದೂಗಳಷ್ಟೇ ಪ್ರಿಯರು’ ಎಂದು ಹೇಳಿದರು.
‘ನೀವು ಮಸೀದಿ, ಗುರುದ್ವಾರ, ಬೌದ್ಧ ವಿಹಾರ ಯಾವುದಕ್ಕಾದರೂ ಹೋಗಬಹುದು. ಆದರೆ, ಎಲ್ಲರ ರಕ್ತ ಒಂದೇ, ನಾವೆಲ್ಲ ಭಾರತೀಯರು. ಬಿಜೆಪಿ ಸರ್ವರ ವಿಕಾಸಕ್ಕಾಗಿ ಕೆಲಸ ಮಾಡುತ್ತದೆ’ ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.