ADVERTISEMENT

ಆ್ಯಂಬುಲೆನ್ಸ್ ಇಲ್ಲ, ಗರ್ಭಿಣಿಯನ್ನು ಆಸ್ಪತ್ರೆಗೆ ಬೈಕ್‌ನಲ್ಲಿ ಕರೆದೊಯ್ದ ಕುಟುಂಬ

​ಪ್ರಜಾವಾಣಿ ವಾರ್ತೆ
Published 28 ಜೂನ್ 2019, 10:23 IST
Last Updated 28 ಜೂನ್ 2019, 10:23 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ರಾಂಚಿ: ರಕ್ತಸ್ರಾವದಿಂದಾಗಿ ಅರೆಪ್ರಜ್ಞೆಸ್ಥಿತಿಯಲ್ಲಿದ್ದ ಗರ್ಭಿಣಿಯನ್ನು ಬೈಕ್‌ನಲ್ಲಿ ಕೂರಿಸಿ ಆಸ್ಪತ್ರೆಗೆ ಕರೆತಂದ ಘಟನೆಯೊಂದು ಜಾರ್ಖಂಡ್‌ನಿಂದ ವರದಿಯಾಗಿದೆ. ಆ್ಯಂಬುಲೆನ್ಸ್ ಸಿಗದ ಕಾರಣ ಶಾಂತೀದೇವಿಯ ಕುಟುಂಬ ಬೈಕ್‌ನಲ್ಲಿ ಆಕೆಯನ್ನುಕರೆತಂದಿತ್ತು ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಪ್ರಕಟಿಸಿದೆ.

ಆ್ಯಂಬುಲೆನ್ಸ್‌ಗಾಗಿ ಕರೆ ಮಾಡಿದರೂ ಪ್ರಯೋಜನವಾಗಲಿಲ್ಲ.108 ಸಹಾಯವಾಣಿಗೆ ಕರೆ ಮಾಡಿ ಅಂಗಲಾಚಿದರೂ ಆ್ಯಂಬುಲೆನ್ಸ್ ಬರಲಿಲ್ಲ.ಕೊನೆಗೆ ನಿರ್ವಾಹವಿಲ್ಲದೆ ಗರ್ಭಿಣಿಯನ್ನು ಬೈಕ್‌ನಲ್ಲಿ ಕೂರಿಸಿ 10 ಕಿ.ಮೀ ದೂರದಲ್ಲಿರುವ ಆರೋಗ್ಯ ಕೇಂದ್ರಕ್ಕೆ ಕರೆತಂದೆವು ಎಂದು ಶಾಂತೀದೇವಿಯ ಪತಿ ಕಮಾಲ್ ಗಂಜುಹು ಹೇಳಿದ್ದಾರೆ.

ಇಷ್ಟೊಂದು ಕಷ್ಟಪಟ್ಟು ಚಂದ್ವಾ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಬಂದರೂ ಅಲ್ಲಿಯೂ ಚಿಕಿತ್ಸೆ ಲಭಿಸಿಲ್ಲ. ಆರೋಗ್ಯ ಕೇಂದ್ರವು ಆಕೆಯನ್ನು ಲತೇಹಾರ್ ಸರ್ದಾರ್ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆಹೇಳಿತು.ಅಲ್ಲಿಂದ ಆ್ಯಂಬುಲೆನ್ಸ್‌ನಲ್ಲಿ 27 ಕಿ.ಮೀ ದೂರದಲ್ಲಿರುವ ಆಸ್ಪಕ್ರೆಗೆ ಕರೆದೊಯ್ಯಲಾಯಿತು.ಆ ಆಸ್ಪತ್ರೆಯ ವೈದ್ಯರು ರಾಂಚಿಯಲ್ಲಿರುವ ರಾಜೇಂದ್ರ ಇನ್ಸಿಟ್ಯೂಟ್ ಆಫ್ ಮೆಡಿಕಲ್ ಸಯನ್ಸ್ (ಆರ್‌ಐಎಂಎಸ್) ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಹೇಳಿದ್ದು, ಕೊನೆಗೆ ಆ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ.

ADVERTISEMENT

ಅಷ್ಟೊಂದು ಗಂಭೀರ ಪರಿಸ್ಥಿತಿಯಲ್ಲಿರುವ ಗರ್ಭಿಣಿಯನ್ನು ಬೇರೆ ಬೇರೆ ಆಸ್ಪತ್ರೆಗೆ ಕರೆದೊಯ್ಯಿರಿ ಎಂದು ಹೇಳಿದ ವೈದ್ಯರ ನಡೆ ಬಗ್ಗೆ ಜನರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.