ADVERTISEMENT

ಚಿತ್ರೀಕರಣಕ್ಕೆ ತೆರಳಿದ್ದ ಬಾಲಿವುಡ್‌ ತಂಡ: ಕಲುಷಿತ ಆಹಾರ ಸೇವಿಸಿ 100ಜನ ಅಸ್ವಸ್ಥ

ಪಿಟಿಐ
Published 18 ಆಗಸ್ಟ್ 2025, 10:41 IST
Last Updated 18 ಆಗಸ್ಟ್ 2025, 10:41 IST
   

ಲೇಹ್ : ಬಾಲಿವುಡ್ ಸಿನಿಮಾವೊಂದರ ಚಿತ್ರೀರಣದ ವೇಳೆ ನಿರ್ಮಾಣ ತಂಡದ 100ಕ್ಕೂ ಹೆಚ್ಚು ಕಾರ್ಮಿಕರು ಕಲುಷಿತ ಆಹಾರ ಸೇವಿಸಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.  

ಭಾನುವಾರ ತಡ ರಾತ್ರಿ ಚಿತ್ರ ನಿರ್ಮಾಣ ತಂಡದಲ್ಲಿ ತೀವ್ರ ಹೊಟ್ಟೆ ನೋವು, ತಲೆನೋವು ಹಾಗೂ ವಾಂತಿಯಿಯಾದ ಕಾರಣ ಅಸ್ವಸ್ಥಗೊಂಡವರನ್ನು ಎಸ್‌ಎನ್‌ಎಂ ಆಸ್ಪತ್ರೆಗೆ ಸೇರಿಸಲಾಗಿತ್ತು.  

ಕಲುಷಿತ ಆಹಾರ ಸೇವನೆಯಿಂದ ಅಸ್ವಸ್ಥಗೊಂಡ ಕಾರ್ಮಿಕರು ಬಾಲಿವುಡ್‌ನ ಸಿನಿಮಾದ ನಿರ್ಮಾಣ ತಂಡದಲ್ಲಿ ಕೆಲಸ ಮಾಡಲೆಂದು ಬೇರೆಡೆಯಿಂದ ಬಂದಿದ್ದರು. 600 ಕ್ಕೂ ಹೆಚ್ಚು ಮಂದಿ ಕಲುಷಿತ ಆಹಾರ ಸೇವಿಸಿದ್ದಾರೆ. ಆಹಾರದ ಮಾದರಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಅಧಿಕೃತವಾಗಿ ತಿಳಿಸಿದ್ದಾರೆ.  

ADVERTISEMENT

ಆಸ್ಪತ್ರೆಯ ಸಿಂಬಂದ್ದಿಗಳೆಲ್ಲರೂ ಪರಿಸ್ಥಿತಿಯನ್ನು ಪರಿಣಾಮಕಾರಿಯಾಗಿ ನಿಭಾಯಿಸಿದರು. ಪೊಲೀಸರು ಕಿಕ್ಕಿರಿದ ಜನರನ್ನು ನಿಯಂತ್ರಿಸುವಲ್ಲಿ ಕೈ ಜೋಡಿಸಿದರು. ಈಗಾಗಲೇ ಹಲವರು ಚೇತರಿಸಿಕೊಂಡ್ಡಿದ್ದಾರೆ. ಇನ್ನು ಕೆಲವರು ಚಿಕಿತ್ಸೆ ಪಡೆಯುತ್ತಿರುವುದಾಗಿ ವೈದ್ಯರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.