ADVERTISEMENT

ಎನ್‌ಸಿಪಿ ಶಾಸಕರಾದ ಅನಿಲ್ ದೇಶಮುಖ್‌, ನವಾಬ್‌ ಮಲಿಕ್‌ ಜಾಮೀನು ಅರ್ಜಿ ತಿರಸ್ಕೃತ

ವಿಧಾನ ಪರಿಷತ್ ಚುನಾವಣೆಯಲ್ಲಿ ಮತ ಚಲಾಯಿಸಲು ಅನುಮತಿ ನಿರಾಕರಣೆ

ಪಿಟಿಐ
Published 17 ಜೂನ್ 2022, 15:33 IST
Last Updated 17 ಜೂನ್ 2022, 15:33 IST
ನವಾಬ್‌ ಮಲಿಕ್‌
ನವಾಬ್‌ ಮಲಿಕ್‌   

ಮುಂಬೈ: ಇದೇ 20ರ ವಿಧಾನ ಪರಿಷತ್ ಚುನಾವಣೆಯಲ್ಲಿ ಮತ ಚಲಾಯಿಸುವ ಸಲುವಾಗಿ ಜಾಮೀನು ನೀಡಬೇಕೆಂದು ಕೋರಿ ಎನ್‌ಸಿಪಿ ಶಾಸಕರಾದ ಅನಿಲ್ ದೇಶಮುಖ್‌, ನವಾಬ್‌ ಮಲಿಕ್‌ ಸಲ್ಲಿಸಿದ್ದ ಅರ್ಜಿಯನ್ನೂ ಬಾಂಬೆ ಹೈಕೋರ್ಟ್‌ ತಿರಸ್ಕರಿಸಿದೆ.

ಅದಾಗಿಯೂ ಹತ್ತು ಸ್ಥಾನಗಳ ಪೈಕಿ ಆರು ಸ್ಥಾನ ಗೆಲ್ಲುವುದಾಗಿ ಮಹಾ ವಿಕಾಸ್ ಅಘಾಡಿ ವಿಶ್ವಾಸ ವ್ಯಕ್ತಪಡಿಸಿದೆ.

ಹೆಚ್ಚುವರಿ ಸಾಲಿಸಿಟರ್ ಜನರಲ್ ಅನಿಲ್ ಸಿಂಗ್ ಮೂಲಕ ಜಾರಿ ನಿರ್ದೇಶನಾಲಯವು ಜನಪ್ರತಿನಿಧಿ ಕಾಯ್ದೆಯ ಸೆಕ್ಷನ್ 62(5) ಉಲ್ಲೇಖಿಸಿ ಮನವಿಯನ್ನು ವಿರೋಧಿಸಿತು. ಜೂನ್ 10ರಂದು ನಡೆದ ರಾಜ್ಯಸಭಾ ಚುನಾವಣೆ ವೇಳೆಯೂ ಈ ಇಬ್ಬರೂ ಜಾಮೀನು ಪಡೆಯಲು ಸಾಧ್ಯವಾಗಿರಲಿಲ್ಲ.

ADVERTISEMENT

ವಿಚಾರಣೆ ಸಂದರ್ಭದಲ್ಲಿ ದೇಶಮುಖ್, ಮಲ್ಲಿಕ್ ಅವರ ವಕೀಲರು, ಶಾಸಕರಿಬ್ಬರೂ ಮತ ಚಲಾಯಿಸುವ ಪ್ರಕ್ರಿಯೆಯಿಂದ ಅನರ್ಹರಾಗಿಲ್ಲ ಅಥವಾ ಅಪರಾಧಿಗಳೆಂದು ಸಾಬೀತಾಗಿಲ್ಲ ಎಂಬುದನ್ನು ಕೋರ್ಟ್ ಗಮನಕ್ಕೆ ತಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.