ADVERTISEMENT

ಕೇರಳ: ಬ್ರಿಟನ್‌ ನೌಕಾಪಡೆಯ ಯುದ್ಧ ವಿಮಾನ ತುರ್ತು ಭೂಸ್ಪರ್ಶ

ಏಜೆನ್ಸೀಸ್
Published 15 ಜೂನ್ 2025, 7:15 IST
Last Updated 15 ಜೂನ್ 2025, 7:15 IST
<div class="paragraphs"><p>ಎಫ್-35 ಯುದ್ಧ ವಿಮಾನ</p></div>

ಎಫ್-35 ಯುದ್ಧ ವಿಮಾನ

   

Credit: X/@elitepredatorss

ತಿರುವನಂತಪುರ: ಇಂಧನ ಖಾಲಿಯಾದ ಕಾರಣಕ್ಕೆ ಬ್ರಿಟನ್‌ ನೌಕಾಪಡೆಯ ಎಫ್-35 ಯುದ್ಧ ವಿಮಾನವು ಶನಿವಾರ ತಡರಾತ್ರಿ ಕೇರಳದ ತಿರುವನಂತಪುರ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ.

ADVERTISEMENT

5ನೇ ತಲೆಮಾರಿನ ಸ್ಟೆಲ್ತ್ ಫೈಟರ್ ಬ್ರಿಟನ್‌ನ HMS ಪ್ರಿನ್ಸ್ ಆಫ್ ವೇಲ್ಸ್ ಕ್ಯಾರಿಯರ್ ಸ್ಟ್ರೈಕ್ ಗ್ರೂಪ್‌ನ ಭಾಗವಾಗಿದೆ. ಈ ಯುದ್ಧ ವಿಮಾನವು ಪ್ರಸ್ತುತ ಇಂಡೋ-ಪೆಸಿಫಿಕ್‌ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿದೆ. ಇತ್ತೀಚೆಗೆ ಭಾರತೀಯ ನೌಕಾಪಡೆಯೊಂದಿಗೆ ಜಂಟಿ ಸಮರಾಭ್ಯಾಸ ನಡೆಸಿತ್ತು ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಸುಗಮ ಮತ್ತು ಸುರಕ್ಷಿತ ಭೂಸ್ಪರ್ಶವನ್ನು ಖಚಿತಪಡಿಸಿಕೊಳ್ಳಲು ವಿಮಾನ ನಿಲ್ದಾಣದ ಅಧಿಕಾರಿಗಳು ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ವಿಮಾನದಲ್ಲಿ ಇಂಧನ ಕಡಿಮೆಯಾಗಿರುವ ಬಗ್ಗೆ ಪೈಲಟ್ ಗಮನಕ್ಕೆ ತಂದಿದ್ದರು. ಕೂಡಲೇ ವಿಮಾನದ ಸುರಕ್ಷಿತ ಲ್ಯಾಡಿಂಗ್‌ಗೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೇಂದ್ರ ಸರ್ಕಾರದ ಅನುಮೋದನೆ ಪಡೆದ ನಂತರ ಇಂಧನ ತುಂಬಿಸಲಾಗುವುದು ಎಂದು ತಿರುವನಂತಪುರ ವಿಮಾನ ನಿಲ್ದಾಣದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.