ADVERTISEMENT

ಕಾಂಗ್ರೆಸ್‌ನದ್ದು ಯುದ್ಧ ಶುರುವಾಗುವ ಮೊದಲೇ ಸೋತ ಪರಿಸ್ಥಿತಿ: ಯಡಿಯೂರಪ್ಪ

ಕಾರವಾನ್ ವರದಿ ಆಧರಿಸಿ ಕಾಂಗ್ರೆಸ್ ವಾಗ್ದಾಳಿಗೆ ತಿರುಗೇಟು

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2019, 12:04 IST
Last Updated 22 ಮಾರ್ಚ್ 2019, 12:04 IST
   

ಬೆಂಗಳೂರು: ‘ಕಾರವಾನ್‌’ ನಿಯತಕಾಲಿಕೆಯ ವರದಿ ಆಧರಿಸಿತಮ್ಮ ವಿರುದ್ಧ ವಾಗ್ದಾಳಿ ನಡೆಸಿದ್ದ ಕಾಂಗ್ರೆಸ್‌ ನಾಯಕರಿಗೆಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ತಿರುಗೇಟು ನೀಡಿದ್ದು, ಕಾಂಗ್ರೆಸ್‌ ಪಕ್ಷದ್ದು ಯುದ್ಧ ಆರಂಭವಾಗುವ ಮೊದಲೇಸೋತ ಪರಿಸ್ಥಿತಿ ಎಂದು ವ್ಯಂಗ್ಯವಾಡಿದ್ದಾರೆ.

ಯಡಿಯೂರಪ್ಪ ಅವರಿಗೆ ಸೇರಿದ ಡೈರಿ ತಮ್ಮ ಬಳಿ ಇದ್ದು, ಅದರಲ್ಲಿ ಕೇಂದ್ರ ಸಚಿವರಾದ ಅರುಣ್‌ ಜೇಟ್ಲಿ, ನಿತಿನ್‌ ಗಡ್ಕರಿ, ರಾಜನಾಥ್‌ ಸಿಂಗ್‌ ಸೇರಿದಂತೆ ಕೆಲವು ನ್ಯಾಯಾಧೀಶರು ಹಾಗೂ ವಕೀಲರುಗಳಿಗೆ ಒಟ್ಟು ₹1,800 ಕೋಟಿ ಲಂಚ ನೀಡಿರುವ ಬಗ್ಗೆ ಬರೆಯಲಾಗಿದೆ ಎಂದು ಕಾರವಾನ್ ವರದಿ ಮಾಡಿತ್ತು.

ಇದನ್ನು ಉಲ್ಲೇಖಿಸಿಬಿಜೆಪಿ ಹಾಗೂ ಯಡಿಯೂರಪ್ಪ ವಿರುದ್ಧ ಕಾಂಗ್ರೆಸ್‌ ಟೀಕಾಪ್ರಹಾರ ನಡೆಸಿತ್ತು.

ADVERTISEMENT

ಆರೋಪ ತಳ್ಳಿಹಾಕಿರುವ ಬಿಎಸ್‌ವೈ,ಕಾಂಗ್ರೆಸ್‌ ಪಕ್ಷ ಹಾಗೂ ಅದರ ನಾಯಕರು ಬೌದ್ಧಿಕ ದಿವಾಳಿತನಕ್ಕೊಳಗಾಗಿದ್ದಾರೆ. ನರೇಂದ್ರ ಮೋದಿ ಅವರ ಜನಪ್ರಿಯತೆ ಹೆಚ್ಚುತ್ತಿರುವುದನ್ನು ಕಂಡು ಅವರು ಹತಾಶರಾಗಿದ್ದಾರೆ. ಅವರು ಆರಂಭವಾಗುವ ಮೊದಲೇಯುದ್ಧ ಸೋತಿದ್ದಾರೆ. ಲಭ್ಯವಾಗಿರುವ ದಾಖಲೆಗಳು ನಕಲಿ ಮತ್ತು ಸುಳ್ಳು ಎಂಬುದನ್ನು ಐಟಿ ಅಧಿಕಾರಿಗಳು ಈಗಾಗಲೇ ಸಾಬೀತುಪಡಿಸಿದ್ದಾರೆ’ ಎಂದು ಸಮರ್ಥಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.