ADVERTISEMENT

ಗುಜರಾತ್‌: 15 ಪಾಕ್‌ ಮೀನುಗಾರರನ್ನು ಸೆರೆಹಿಡಿದ ಬಿಎಸ್‌ಎಫ್‌

ಪಿಟಿಐ
Published 24 ಆಗಸ್ಟ್ 2025, 4:46 IST
Last Updated 24 ಆಗಸ್ಟ್ 2025, 4:46 IST
<div class="paragraphs"><p>ಬಿಎಸ್‌ಎಫ್‌</p></div>

ಬಿಎಸ್‌ಎಫ್‌

   

ಭುಜ್: ಗುಜರಾತ್‌ನ ಕಚ್‌ ಜಿಲ್ಲೆಯ ಕರಾವಳಿ ತೀರದಲ್ಲಿ ಗಡಿ ಭದ್ರತಾ ಪಡೆ (ಬಿಎಸ್‌ಎಫ್‌) ಅಧಿಕಾರಿಗಳು 15 ಮಂದಿ ಪಾಕ್ ಮೀನುಗಾರರನ್ನು ಬಂಧಿಸಿದ್ದು, ಒಂದು ನಾಡದೋಣಿಯನ್ನು ಜಪ್ತಿ ಮಾಡಿದ್ದಾರೆ.

ಕಚ್ ಪ್ರದೇಶದ ಕೋರಿ ಕ್ರೀಕ್‌ನಲ್ಲಿ ಅಪರಿಚಿತ ದೋಣಿ ಪತ್ತೆಯಾಗಿರುವ ಬಗ್ಗೆ ಮಾಹಿತಿ ಆಧರಿಸಿ ಶನಿವಾರ ಶೋಧ ಕಾರ್ಯಾಚರಣೆ ನಡೆಸಲಾಗಿತ್ತು. ಈ ವೇಳೆ 15 ಮಂದಿ ಮೀನುಗಾರರನ್ನು ಬಂಧಿಸಲಾಗಿದೆ ಎಂದು ಬಿಎಸ್‌ಎಫ್ ಪ್ರಕಟಣೆಯಲ್ಲಿ ತಿಳಿಸಿದೆ.

ADVERTISEMENT

ಬಂಧಿತರನ್ನು ಪಾಕಿಸ್ತಾನದ ಸಿಂಧಿ ಪ್ರಾಂತ್ಯದ ಸುಜಾವಲ್ ಜಿಲ್ಲೆಯ ನಿವಾಸಿಗಳು ಎಂದು ಗುರುತಿಸಲಾಗಿದೆ. ದೋಣಿಯಲ್ಲಿ 60 ಕೆ.ಜಿ ಮೀನು, 9 ಮೀನು ಹಿಡಿಯುವ ಬಲೆ, ಐಸ್‌ಗಡ್ಡೆ, ಆಹಾರ, ಮರದ ತುಂಡು, ₹200 ಪಾಕಿಸ್ತಾನ ಕರೆನ್ಸಿ ಮತ್ತು ಮೊಬೈಲ್‌ ಪೋನ್ ಅನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.