ADVERTISEMENT

ಬಾಂಗ್ಲಾ ಗಡಿ: ಬಿಎಸ್‌ಎಫ್ ಯೋಧನ ಹತ್ಯೆ

ಪಿಟಿಐ
Published 8 ಆಗಸ್ಟ್ 2022, 20:23 IST
Last Updated 8 ಆಗಸ್ಟ್ 2022, 20:23 IST
   

ಕೋಲ್ಕತ್ತ: ಪಶ್ಚಿಮ ಬಂಗಾಳದ ನಾದಿಯಾ ಜಿಲ್ಲೆಯ ಬಾಂಗ್ಲಾದೇಶದ ಗಡಿ ಪ್ರದೇಶದ ಬಳಿ ಸೋಮವಾರ ಕಳ್ಳಸಾಗಣೆಗಾರರು ಬಿಎಸ್‌ಎಫ್‌ ಯೋಧನ ಮೇಲೆ ಗುಂಡು ಹಾರಿಸಿ ಹತ್ಯೆಗೈದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಫೆನ್ಸೆಡಿಲ್ ಕೆಮ್ಮಿನ ಸಿರಪ್‌ಗಳನ್ನು ಸಂಗ್ರಹಿಸಲಾಗಿರುವ ಕುರಿತು ದೊರೆತ ಖಚಿತ ಸುಳಿವಿನ ಮೇರೆಗೆ ಬಿಎಸ್‌ಎಫ್ ತಂಡವು ಛಾಪ್ರಾ ಪ್ರದೇಶದಲ್ಲಿ ಮನೆಯೊಂದರ ಮೇಲೆ ದಾಳಿ ನಡೆಸಿತು. ಈ ಸಂದರ್ಭದಲ್ಲಿ ಕಳ್ಳ ಸಾಗಣೆಗಾರರ ಗುಂಪು ಹಾರಿಸಿದ ಗುಂಡಿಗೆ ಯೋಧ ಸಾವಿಗೀಡಾಗಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT