
ನವದೆಹಲಿ: ಕಾಶ್ಮೀರದಿಂದ ಸಾವಿರಾರು ಮೈಲು ದೂರದಲ್ಲಿರುವ ಫ್ರಾನ್ಸ್‌ನ ವಸ್ತುಸಂಗ್ರಹಾಲಯದಲ್ಲಿ ಬಾರಾಮುಲ್ಲಾದಲ್ಲಿನ ಮೂರು ಬೌದ್ಧ ಸ್ತೂಪಗಳಿರುವ ಹಳೆಯ ಫೋಟೊ ಪತ್ತೆಯಾಗಿದೆ. ಇದು ಎರಡು ಸಾವಿರ ವರ್ಷಗಳ ಹಿಂದಿನ ಕಾಶ್ಮೀರದ ಗತವೈಭವಕ್ಕೆ ಸಾಕ್ಷಿಯಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಈ ವರ್ಷದ ಕೊನೆಯ ‘ಮನ್ ಕಿ ಬಾತ್’ನಲ್ಲಿ ಪ್ರಧಾನಿ ಮೋದಿ ಅವರು ಫ್ರಾನ್ಸ್‌ನಲ್ಲಿರುವ ಫೋಟೊದ ಕುರಿತು ಮಾತನಾಡಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಸಮೀಪದ ಝೆಹನ್ಪೋರಾ ಬಳಿ ಮಾನವ ನಿರ್ಮಿತ ದೊಡ್ಡ ರಚನೆಗಳು ಪತ್ತೆಯಾಗಿವೆ. ಇದು ನಮ್ಮ ಸಂಸ್ಕೃತಿ ಹಾಗೂ ಇತಿಹಾಸದ ಕುರಿತು ಹೆಮ್ಮೆ ಪಡುವಂತೆ ಮಾಡುತ್ತದೆ ಎಂದು ಹೇಳಿದ್ದಾರೆ.
‘ಇಷ್ಟು ದಿನಗಳ ಕಾಲ ಆ ರಚನೆಗಳು ಇದ್ದ ಜಾಗವನ್ನು ಸಾಮಾನ್ಯ ದಿಬ್ಬಗಳು ಎಂದು ಜನರು ಭಾವಿಸಿದ್ದರು. ಆದರೆ, ಪುರಾತತ್ವ ಶಾಸ್ತ್ರಜ್ಞರು ಆ ಸ್ಥಳವನ್ನು ಅಧ್ಯಯನ ಮಾಡಿದ ಬಳಿಕ ಅದು ಮಾನವ ನಿರ್ಮಿತ ರಚನೆಗಳು ಎಂದು ಗುರುತಿಸಿದ್ದಾರೆ. ಇದಕ್ಕಾಗಿ ಡ್ರೋನ್ ಮೂಲಕ ಮೇಲಿನಿಂದ ನೆಲದ ಚಿತ್ರಗಳನ್ನು ತೆಗೆಯಲಾಗಿತ್ತು’ ಎಂದು ತಿಳಿಸಿದ್ದಾರೆ.
ಮಾಸಿಕ ರೇಡಿಯೊ ಕಾರ್ಯಕ್ರಮ 'ಮನ್ ಕಿ ಬಾತ್'ನ 129ನೇ ಸಂಚಿಕೆ ಇಂದು(ಭಾನುವಾರ) ದೇಶದಾದ್ಯಂತ ಪ್ರಸಾರವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.