ADVERTISEMENT

ಯುವಕರ ಕೌಶಲ ಅಭಿವೃದ್ಧಿಗೆ ₹ 7,23,000 ಕೋಟಿ ಸಾಲ

​ಪ್ರಜಾವಾಣಿ ವಾರ್ತೆ
Published 2 ಜುಲೈ 2019, 9:28 IST
Last Updated 2 ಜುಲೈ 2019, 9:28 IST
   

ದೆಹಲಿ: ಪ್ರಧಾನ ಮಂತ್ರಿ ಕೌಶಲ ಯೋಜನೆಯ ಅಡಿ ಒಂದು ಲಕ್ಷ ಯುವಕರಿಗೆ ತರಬೇತಿ ನೀಡಲಾಗಿದೆ ಎಂದು ಸಚಿವ ಪಿಯೂಷ್‌ ಗೋಯಲ್‌ ತಿಳಿಸಿದ್ದಾರೆ. ಯುವಕರ ಕೌಶಲಾಭಿವೃದ್ಧಿಗೆ ಸರ್ಕಾರ ಹಲವು ಕ್ರಮಕೈಗೊಂಡಿದೆ ಎಂದು ಹೇಳಿದ ಸಚಿವರು, ಸ್ಟ್ರಾರ್ಟ್‌ಅಪ್‌ ಇಂಡಿಯಾ ಹಾಗೂ ಸ್ಟ್ಯಾಂಡ್ಅಪ್ ಇಂಡಿಯಾ ಯೋಜನೆಯಲ್ಲಿ ಸ್ವಯಂ ಉದ್ಯೋಗ ಕೈಗೊಳ್ಳಲು ಮುದ್ರಾ ಯೋಜನೆಯ ಮೂಲಕ ಸಾಲ ನೀಡಲಾಗಿದೆ ಎಂದಿದ್ದಾರೆ.‌

ಮುದ್ರಾ ಯೋಜನೆಯ ಅಡಿ 15.56 ಕೋಟಿ ಯುವಕರಿಗೆ 7,23,000 ಕೋಟಿ ಸಾಲ ನೀಡಲಾಗಿದೆ. ಜಾಗತಿಕ ಸವಾಲುಗಳನ್ನು ಎದುರಿಸಲು ಅನುವಾಗುವಂತೆ ಯುವಕರಿಗೆ ತರಬೇತಿ ನೀಡಲಾಗಿದ್ದು, ಸರ್ಕಾರಿ ಸಾಮ್ಯದ ಸಂಸ್ಥೆಗಳಲ್ಲೂ ಉದ್ಯೋಗವಕಾಶ ನೀಡಲಾಗುತ್ತಿದೆ ಎಂದಿದ್ದಾರೆ.

‘ಈಗ ಉದ್ಯೋಗ ಹುಡುಕುವವರು ನಂತರ ಕೆಲಸ ನೀಡುವವರಾಗಬೇಕು ಎಂಬುದು ನಮ್ಮ ಮಹದಾಸೆ ಎಂದ ಗೋಯಲ್, ನವೋದ್ಯಮ ಸ್ಥಾಪನೆಯಲ್ಲಿ ಭಾರತವು ವಿಶ್ವದಲ್ಲಿಯೇ ಎರಡನೇ ಸ್ಥಾನದಲ್ಲಿದೆ. ಇದಕ್ಕೆ ನಮ್ಮ ಯವಕರನ್ನು ಅಭಿನಂದಿಸಲೇಬೇಕಿದೆ ಎಂದು ಶ್ಲಾಘಸಿಸಿದರು.

ADVERTISEMENT

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.