ADVERTISEMENT

ರಾಜಸ್ಥಾನದಲ್ಲಿ ಬಸ್‌ಗೆ ಬೆಂಕಿ; ಆರು ಮಂದಿ ಸಾವು

ಏಜೆನ್ಸೀಸ್
Published 17 ಜನವರಿ 2021, 4:45 IST
Last Updated 17 ಜನವರಿ 2021, 4:45 IST
ಬಸ್‌ಗೆ ಬೆಂಕಿ–ಸಾಂದರ್ಭಿಕ ಚಿತ್ರ
ಬಸ್‌ಗೆ ಬೆಂಕಿ–ಸಾಂದರ್ಭಿಕ ಚಿತ್ರ   

ಜೈಪುರ: ರಾಜಸ್ಥಾನದ ಜಾಲೋರ್‌ ಜಿಲ್ಲೆಯಲ್ಲಿ ಖಾಸಗಿ ಬಸ್‌ಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಆರು ಮಂದಿ ಸಾವಿಗೀಡಾಗಿದ್ದಾರೆ.

ಎಲೆಕ್ಟ್ರಿಕ್‌ ಕೇಬಲ್‌ಗೆ ತಾಗಿದ್ದರಿಂದ ಬಸ್‌ಗೆ ಬೆಂಕಿ ಹೊತ್ತಿಕೊಂಡಿರುವ ಆರು ಮಂದಿ ದಹನವಾಗಿರುವ ಘಟನೆ ಶನಿವಾರ ತಡರಾತ್ರಿ ಸಂಭವಿಸಿದೆ. ಇದೇ ಅವಘಡದಲ್ಲಿ 19 ಮಂದಿ ಗಾಯಗೊಂಡಿರುವುದಾಗಿ ವರದಿಯಾಗಿದೆ.

ಪ್ರಯಾಣಿಕರಿಂದ ಭರ್ತಿಯಾಗಿದ್ದ ಬಸ್‌ ಮಂಡೋರ್‌ನಿಂದ ಬ್ಯಾವರ್‌ ಕಡೆಗೆ ಸಾಗುತ್ತಿತ್ತು.

ADVERTISEMENT

ತೀವ್ರವಾಗಿ ಗಾಯಗೊಂಡಿರುವ ಆರು ಜನರನ್ನು ಜೋಧಪುರದ ಆಸ್ಪತ್ರೆಗೆ ಸಾಗಿಸಲಾಗಿದೆ, 13 ಮಂದಿ ಜಾಲೋರ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಾಲೋರ್‌ನ ಮುಖ್ಯ ಆರೋಗ್ಯ ಅಧಿಕಾರಿ ಡಾ.ಎಸ್‌.ಪಿ.ಶರ್ಮಾ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.