
ನವದೆಹಲಿ: ಮಿಜೋರಾಂನ ಡಂಪಾ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಉಪ ಚುನಾವಣೆಯಲ್ಲಿ ಅಲ್ಲಿನ ವಿರೋಧ ಪಕ್ಷವಾದ ಮಿಜೋ ನ್ಯಾಷನಲ್ ಫ್ರಂಟ್(ಎಮ್‌ಎನ್‌ಎಫ್) ನಾಯಕ ಹಾಗೂ ಮಾಜಿ ಸಚಿವ ಆರ್. ಲಾಲ್ತಾಂಗ್ಲಿಯಾನಾ ಅವರು 562 ಮತಗಳಿಂದ ಝೆಡ್‌ಪಿಎಮ್ ಅಭ್ಯರ್ಥಿ ವಿರುದ್ಧ ಗೆಲುವು ಸಾಧಿಸಿದ್ದಾರೆ.
ನವೆಂಬರ್ 11ರಂದು ಉಪ ಚುನಾವಣೆಯ ಮತದಾನ ನಡೆದಿತ್ತು. ಬಿಹಾರ ವಿಧಾನಸಭಾ ಚುನಾವಣೆಯ ಜೊತೆಗೆ 7 ರಾಜ್ಯಗಳ 8 ವಿಧಾನಸಭಾ ಕ್ಷೇತ್ರಗಳಲ್ಲಿ ಉಪ ಚುನಾವಣೆಯ ಮತ ಎಣಿಕೆ ನಡೆಯುತ್ತಿದೆ.
ಪಂಜಾಬ್‌ನ ತರನ್ ತಾರನ್ ವಿಧಾನಸಭಾ ಕ್ಷೇತ್ರದಲ್ಲಿ ಎಎಪಿ ಪಕ್ಷದ ಹರ್ಮೀತ್ ಸಂಧು ಅವರು ಮುನ್ನಡೆ ಸಾಧಿಸಿದ್ದಾರೆ.
ಒಡಿಶಾದ ನುಪಾವಾಡ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಜಯ್ ದೊಲಾಕಿಯಾ ಅವರು ಬಿಜೆಡಿ ಅಭ್ಯರ್ಥಿ ವಿರುದ್ಧ ಮುನ್ನಡೆ ಪಡೆದಿದ್ದಾರೆ.
ಜಾರ್ಖಂಡ್‌ನ ಗತಿಶೀಲಾ ವಿಧಾನಸಭಾ ಕ್ಷೇತ್ರದಲ್ಲಿ ಜೆಎಮ್‌ಎಮ್ ಅಭ್ಯರ್ಥಿ ಸೋಮೇಶ್ ಸೊರೇನ್ ಮುನ್ನಡೆಯಲ್ಲಿದ್ದಾರೆ.
ಜಮ್ಮು ಕಾಶ್ಮೀರದ ನಗ್ರೊತಾ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ದೇವಯಾನಿ ರಾಣಾ ಅವರು ಮುನ್ನಡೆ ಸಾಧಿಸಿದ್ದಾರೆ.
ತೆಲಂಗಾಣದ ಜುಬಿಲಿ ಹಿಲ್ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿ. ನವೀನ್ ಯಾದವ್ ಅವರು ಬಿಆರ್‌ಎಸ್ ಅಭ್ಯರ್ಥಿ ವಿರುದ್ಧ ಮುನ್ನಡೆ ಪಡೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.