ADVERTISEMENT

ಸಣ್ಣ ಉದ್ದಿಮೆಗಳಿಗೆ ನೆರವು: ₹ 6,062 ಕೋಟಿ ಮೊತ್ತದ ಯೋಜನೆಗೆ ಕೇಂದ್ರ ಅಸ್ತು

ಪಿಟಿಐ
Published 30 ಮಾರ್ಚ್ 2022, 14:55 IST
Last Updated 30 ಮಾರ್ಚ್ 2022, 14:55 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಸಣ್ಣ ಮತ್ತು ಮಧ್ಯಮ ಉದ್ದಿಮೆಗಳಿಗೆ ವಹಿವಾಟು ವೃದ್ಧಿಗೆ ಪೂರಕವಾಗಿ ಆರ್ಥಿಕ ಬೆಂಬಲ ನೀಡಲು, ₹ 6,062 ಕೋಟಿ ಮೊತ್ತದ ವಿಶ್ವಬ್ಯಾಂಕ್ ನೆರವಿನ ಯೋಜನೆಗೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ.

ಪ್ರಧಾನಿ ನರೇಂದ್ರಮೋದಿ ಅಧ್ಯಕ್ಷತೆಯ ಸಂಪುಟ ಸಮಿತಿಯು ಈ ಯೋಜನೆಗೆ ಅನುಮೋದನೆ ನೀಡಿತು ಎಂದು ಹೇಳಿಕೆ ತಿಳಿಸಿದೆ. ಯೋಜನೆಯಡಿ ಎಂಎಸ್‌ಎಂ ಸ್ಥಾಪನೆ ಮತ್ತು ಸಾಮರ್ಥ್ಯ ಪ್ರಗತಿ (ರ‍್ಯಾಂಪ್) ಯೋಜನೆ 2023ನೇ ವರ್ಷದಿಂದ ಆರಂಭವಾಗಲಿದೆ.

ಯೋಜನೆಯ ಒಟ್ಟು ಮೊತ್ತದಲ್ಲಿ ₹ 3,750 ಕೋಟಿ ವಿಶ್ವಬ್ಯಾಂಕ್‌ನ ಸಾಲವಾಗಿದ್ದರೆ, ಉಳಿದ 2,312.45 ಕೋಟಿ ಮೊತ್ತವನ್ನು ಕೇಂದ್ರ ಸರ್ಕಾರ ಒದಗಿಸಲಿದೆ. ಕೊರೊನೋತ್ತರದಲ್ಲಿ ಉದ್ದಿಮೆಗಳಿಗೆ ಚೇತರಿಕೆ ನೀಡಲು ಸಂಬಂಧಿತ ಸಚಿವಾಲಯ ಒತ್ತು ನೀಡಲಿದೆ.

ADVERTISEMENT

ರ‍್ಯಾಂಪ್‌ ಯೋಜನೆಯಡಿ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಸಣ್ಣ ಮತ್ತು ಮಧ್ಯಮ ಗಾತ್ರದ ಸುಮಾರು 6.30 ಕೋಟಿ ಉದ್ದಿಮೆಗಳಿಗೆ ನೆರವಾಗಲಿದೆ. ವಿಶೇಷವಾಗಿ 5.55 ಲಕ್ಷ ಉದ್ದಿಮೆಗಳ ಸಾಮರ್ಥ್ಯ ವೃದ್ಧಿಸುವ ಗುರಿಯನ್ನು ಹೊಂದಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.