ಪ್ರಾತಿನಿಧಿಕ ಚಿತ್ರ
ಕಳೆದ ಐದು ವರ್ಷಗಳಲ್ಲಿ ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಗಳಲ್ಲಿ (ಸಿಎಪಿಎಫ್) ಸುಮಾರು 730 ಸಿಬ್ಬಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜೊತೆಗೆ, 55 ಸಾವಿರಕ್ಕೂ ಹೆಚ್ಚು ಸಿಬ್ಬಂದಿ ಸ್ವಯಂ ನಿವೃತ್ತಿ ಪಡೆದುಕೊಂಡಿದ್ದಾರೆ ಅಥವಾ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ ಎನ್ನುವ ಮಾಹಿತಿಯನ್ನು ಕೇಂದ್ರ ಗೃಹಸಚಿವಾಲಯವು ರಾಜ್ಯಸಭೆಗೆ ನೀಡಿದೆ.
ಈ ಬಗ್ಗೆ ರಾಜಸ್ಥಾನದ ಕಾಂಗ್ರೆಸ್ ಸಂಸದ ಮುಕುಲ್ ಬಾಲಕೃಷ್ಣ ವ್ಯಾಸ್ನಿಕ್ ಅವರು ಕೇಳಿದ ಪ್ರಶ್ನೆಗೆ ಸಚಿವಾಲಯ ಉತ್ತರಿಸಿದೆ. ‘ಸುದೀರ್ಘ ಕೆಲಸದ ಅವಧಿ, ನಿಯಮಿತವಾಗಿ ವಾರದ ರಜೆ ನೀಡದಿರುವ ಕಾರಣಗಳಿಂದ ಈ ಪಡೆಗಳಲ್ಲಿ ಸ್ವಯಂ ನಿವೃತ್ತಿ, ರಾಜೀನಾಮೆ ಹಾಗೂ ಆತ್ಯಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿದೆಯೇ? ಮತ್ತು ಇವೇ ಕಾರಣಗಳಿಂದ ಈ ಪಡೆಗಳಲ್ಲಿನ ಸಿಬ್ಬಂದಿಗಳಲ್ಲಿ ಕಾರ್ಯಕ್ಷಮತೆ ಕಡಿಮೆ ಆಗಿದೆಯೇ?’ ಎಂದು ವ್ಯಾಸ್ನಿಕ್ ಅವರು ಪ್ರಶ್ನೆ ಕೇಳಿದ್ದರು.
* ಅಸ್ಸಾಂ ರೈಫಲ್ಸ್ (ಎಆರ್)
* ಗಡಿ ಭದ್ರತಾ ಪಡೆ (ಬಿಎಸ್‌ಎಫ್)
* ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್)
* ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್)
* ಇಂಡೊ–ಟಿಬೆಟಿಯನ್ ಗಡಿ ಪೊಲೀಸ್ (ಐಟಿಬಿಪಿ)
* ರಾಷ್ಟ್ರೀಯ ಭದ್ರತಾ ಕಾವಲುಪಡೆ (ಎನ್‌ಎಸ್‌ಜಿ)
* ಸಶಸ್ತ್ರ ಸೀಮಾ ಬಲ (ಎಸ್‌ಎಸ್‌ಬಿ)
* ಪಾರದರ್ಶಕ, ನ್ಯಾಯಯುತ ರಜೆ ವ್ಯವಸ್ಥೆಯನ್ನು ಜಾರಿ ಮಾಡುವುದಕ್ಕೆ ಕ್ರಮ ಕೈಗೊಳ್ಳಲಾಗಿದೆ. ಕಠಿಣ/ಸವಾಲಿನ ಸ್ಥಳಗಳಲ್ಲಿ ಕಾರ್ಯ ನಿರ್ವಹಿಸಿದ್ದರೆ ಅಂಥವರ ಮುಂದಿನ ನಿಯೋಜನೆಯನ್ನು ಅವರ ಇಚ್ಛೆ ಅನುಸಾರವೇ ಮಾಡಲಾಗುವುದು
* ನಿಯಮಿತ ವಿರಾಮ ಸಮಯ ಹಾಗೂ ಕೆಲಸದ ಅವಧ ಕಡಿತಕ್ಕೆ ಕ್ರಮ ಕೈಗೊಳ್ಳಲಾಗಿದೆ
* ಮನರಂಜನೆ, ಕ್ರೀಡೆ ಸೇರಿದಂತೆ ಹಲವು ಚಟುವಟಿಕೆಗಳ ಮೂಲಕ ಸಿಬ್ಬಂದಿಯ ಒತ್ತಡ ನಿವಾರಣೆಗೆ ಕ್ರಮ. ಜೊತೆಗೆ ‘ಆರ್ಟ್ ಆಫ್ ಲೀವಿಂಗ್’ ಕೋರ್ಸ್‌ಗಳ ಆಯೋಜನೆ. ಮಹಿಳಾ ಸಿಬ್ಬಂದಿಗಾಗಿ ಶಿಶುವಿಹಾರಗಳ ಸ್ಥಾಪನೆ
ಆಧಾರ: ಕೇಂದ್ರ ಸಚಿವಾಲಯ ರಾಜ್ಯಸಭೆಗೆ ನೀಡಿದ ಉತ್ತರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.