ಹೈದರಾಬಾದ್: ಕಾರ್ಯಕ್ರಮವೊಂದರಲ್ಲಿ ಅಕ್ರಮವಾಗಿ ಮತದಾರರ ಚೀಟಿ ಹಂಚುತ್ತಿದ್ದ ಆರೋಪದ ಮೇಲೆ ಕಾಂಗ್ರೆಸ್ ನಾಯಕರೊಬ್ಬರ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇತ್ತೀಚೆಗೆ ಬುಬ್ಲಿ ಹಿಲ್ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಕಾಂಗ್ರೆಸ್ ನಾಯಕ ವಿ. ನವೀನ್ ಯಾದವ್ ಅವರು ಅಕ್ರಮವಾಗಿ ಮತದಾರರ ಚೀಟಿ ಹಂಚಿದ್ದರು ಎಂದು ಬಿಜೆಪಿ ಸಂಸದ ಎಂ. ರಘುನಂದನ್ ರಾವ್ ಅವರು ಚುನಾವಣಾ ಆಯೋಗಕ್ಕೆ ಸೋಮವಾರ ದೂರು ನೀಡಿದ್ದರು.
ಚುನಾವಣಾ ಆಯೋಗದ ಸೂಚನೆಯ ಪ್ರಕಾರ, ಚುನಾವಣಾ ಅಧಿಕಾರಿ ಮತ್ತು ಸ್ಥಳೀಯ ಆಡಳಿತದ ನೇರ ಮೇಲ್ವಿಚಾರಣೆಯಲ್ಲಿ ಬೂತ್ ಮಟ್ಟದ ಅಧಿಕಾರಿಗೆ ಮಾತ್ರ ಮತದಾರರ ಚೀಟಿ ಹಂಚುವ ಅಧಿಕಾರವಿದೆ. ಅಕ್ರಮವಾಗಿ ಮತದಾರರ ಚೀಟಿ ಹಂಚಿದವರ ವಿರುದ್ಧ ಪ್ರಕರಣ ದಾಖಲಿಸಿ, ತನಿಖೆ ನಡೆಸಬೇಕು ಎಂದು ಎಂ. ರಘುನಂದನ್ ರಾವ್ ಆರೋಪಿಸಿದ್ದರು.
ನವೆಂಬರ್ 11 ರಂದು ಬುಬ್ಲಿ ಹಿಲ್ ವಿಧಾನಸಭಾ ಕ್ಷೇತ್ರದಲ್ಲಿ ಉಪಚುನಾವಣೆ ಜರುಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.