ADVERTISEMENT

ಸಿಎಂ ಶಿಂದೆ ವಿರುದ್ಧ ಹೇಳಿಕೆ: ಉದ್ಧವ್‌ ಬಣದ 7 ನಾಯಕರ ವಿರುದ್ಧ ಪ್ರಕರಣ

ಪಿಟಿಐ
Published 12 ಅಕ್ಟೋಬರ್ 2022, 2:31 IST
Last Updated 12 ಅಕ್ಟೋಬರ್ 2022, 2:31 IST
ಮಹಾರಾಷ್ಟ್ರ ಸಿಎಂ ಏಕನಾಥ ಶಿಂದೆ ಮತ್ತು ಉಪ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ | ಪಿಟಿಐ ಚಿತ್ರ
ಮಹಾರಾಷ್ಟ್ರ ಸಿಎಂ ಏಕನಾಥ ಶಿಂದೆ ಮತ್ತು ಉಪ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ | ಪಿಟಿಐ ಚಿತ್ರ   

ಥಾಣೆ: ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂಬ ಆರೋಪದಡಿ 'ಶಿವಸೇನಾ ಉದ್ಧವ್‌ ಬಾಳಾಸಾಹೇಬ್‌ ಠಾಕ್ರೆ' ಪಕ್ಷದ ಏಳು ಮುಖಂಡರ ಮೇಲೆ ಕ್ರಿಮಿನಲ್‌ ಪ್ರಕರಣ ದಾಖಲಿಸಲಾಗಿದೆ.

ಉದ್ಧವ್‌ ಬಣದ ವಿನಾಯಕ್‌ ರಾವತ್‌, ಭಾಸ್ಕರ್‌ ಜಾಧವ್‌ ಮತ್ತು ಸುಷ್ಮಾ ಅಂಧರೆ ಮತ್ತಿತರರ ಮೇಲೆ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಸಿಎಂ ಶಿಂದೆ ಅವರ ವಿರುದ್ಧ ಭಾನುವಾರ ನಡೆದ ಉದ್ಧವ್‌ ಪಕ್ಷದ ಮಹಾಪ್ರಭೋದನ ಯಾತ್ರೆಯಲ್ಲಿ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಏಳು ಮಂದಿ ವಿರುದ್ಧ ಶಿಂದೆ ಬೆಂಬಲಿಗ ದತ್ತರಾಮ್‌ ಗವಾಸ್‌ ದೂರು ನೀಡಿದ್ದಾರೆ.

ADVERTISEMENT

ಮಹಾರಾಷ್ಟ್ರ ಪೊಲೀಸರು ಶಿವಸೇನಾ ಉದ್ಧವ್‌ ಬಾಳಾಸಾಹೇಬ್‌ ಠಾಕ್ರೆ ಪಕ್ಷದ ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದು ಉದ್ಧವ್‌ ಬಣ ಆರೋಪಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.