ADVERTISEMENT

ಮೇಘಾಲಯದ ಕ್ಯಾಥೋಲಿಕ್ ಚರ್ಚ್‌ಗಳಲ್ಲಿ ಸಲಿಂಗಿ ಜೋಡಿಗೆ ಪಾದ್ರಿಗಳ ಆಶೀರ್ವಾದ

ಕ್ಯಾಥೋಲಿಕ್ ಚರ್ಚ್‌ಗಳಲ್ಲಿ ಸಲಿಂಗಿ ಜೋಡಿಗೆ ಪಾದ್ರಿಗಳು ಆಶೀರ್ವದಿಸಬಹುದು ಎಂಬ ತೀರ್ಮಾನವನ್ನು ಈಚೆಗೆ ಪೋಪ್ ಫ್ರಾನ್ಸಿಸ್ ತೆಗೆದುಕೊಂಡಿದ್ದರು

ಪಿಟಿಐ
Published 23 ಡಿಸೆಂಬರ್ 2023, 12:51 IST
Last Updated 23 ಡಿಸೆಂಬರ್ 2023, 12:51 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಶಿಲ್ಲಾಂಗ್: ‘ತನ್ನ ಚರ್ಚ್‌ಗಳ ಪಾದ್ರಿಗಳು ಸಲಿಂಗಿ ಜೋಡಿಗೆ ಆಶೀರ್ವದಿಸಲು ಯಾವುದೇ ಅಡ್ಡಿಯಿಲ್ಲ’ ಎಂದು ಮೇಘಾಲಯದ ಕ್ಯಾಥೋಲಿಕ್ ಚರ್ಚ್ ಸಂಘಟನೆ ತೀರ್ಮಾನ ತೆಗೆದುಕೊಂಡಿದೆ.

‘ಆದರೆ, ಈ ಆಶೀರ್ವಾದವು, ವಿವಾಹ ವಿಧಾನಗಳನ್ನು ಹೋಲುವ ಯಾವುದೇ ವಿಧಿಗಳಿಲ್ಲದೆ ಆಶೀರ್ವಾದ ಮಾಡಬಹುದು ಎಂಬ ಅರ್ಥ ಕಲ್ಪಿಸುತ್ತದೆ’ ಎಂದು ಅದು ಹೇಳಿದೆ.

ADVERTISEMENT

‘ಕ್ಯಾಥೋಲಿಕ್ ಚರ್ಚ್‌ಗಳಲ್ಲಿ ಸಲಿಂಗಿ ಜೋಡಿಗೆ ಪಾದ್ರಿಗಳು ಆಶೀರ್ವದಿಸಬಹುದು ಎಂಬ ತೀರ್ಮಾನವನ್ನು ಈಚೆಗೆ ಪೋಪ್ ಫ್ರಾನ್ಸಿಸ್ ತೆಗೆದುಕೊಂಡಿದ್ದರು. ಮೇಘಾಲಯದಲ್ಲೂ ವಿವಾಹವಿಧಿಗಳನ್ನು ಹೊರತುಪಡಿಸಿ ಸಲಿಂಗಿ ಜೋಡಿಗೆ ಕ್ಯಾಥೋಲಿಕ್ ಚರ್ಚ್ ಪಾದ್ರಿಗಳು ಆಶೀರ್ವದಿಸಬಹುದು ಎಂಬ ತೀರ್ಮಾನ ಮಾಡಲಾಗಿದೆ ಎಂದು ಶಿಲ್ಲಾಂಗ್‌ನ ಆರ್ಚ್ ಬಿಷಪ್ ವಿಕ್ಟರ್ ಲಿಂಗ್ಡೊ ಹೇಳಿದ್ದಾರೆ.

‘ಈ ಆಶೀರ್ವಾದವು ಅನೌಪಚಾರಿಕವಾಗಿರುತ್ತದೆ. ಇದನ್ನೇ ಮಾನ್ಯತೆ ಎಂದು ಭಾವಿಸುವಂತಿಲ್ಲ’ ಎಂದು ಅವರು ಹೇಳಿದ್ದಾರೆ.

ಭಾರತದ ಈಶಾನ್ಯ ರಾಜ್ಯವಾದ ಮೇಘಾಲಯದಲ್ಲಿ ಸುಮಾರು 10 ಲಕ್ಷ ಕ್ಯಾಥೋಲಿಕ್ ಅನುಯಾಯಿಗಳು ಇದ್ದಾರೆ.

ಭಾರತದಲ್ಲಿ ಸಲಿಂಗಿಗಳ ವಿವಾಹಕ್ಕೆ ಕಾನೂನು ಮಾನ್ಯತೆ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.