ADVERTISEMENT

ಸೌದಿ ಅರೇಬಿಯಾ ಕೋರಿಕೆ ಮೇರೆಗೆ CBI ಕಾರ್ಯಾಚರಣೆ: ಕೊಲೆ ಆರೋಪಿಯ ಬಂಧನ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2025, 11:08 IST
Last Updated 16 ಆಗಸ್ಟ್ 2025, 11:08 IST
<div class="paragraphs"><p>ಬಂಧನ  </p></div>

ಬಂಧನ

   

(ಪ್ರಾತಿನಿಧಿಕ ಚಿತ್ರ)

ನವದೆಹಲಿ: ಅಪರಾಧ ಕೃತ್ಯಗಳಿಗೆ ಕಠಿಣಾತಿ ಕಠಿಣ ಶಿಕ್ಷೆ ನೀಡುವಲ್ಲಿ ಹೆಸರುವಾಸಿಯಾಗಿರುವ ಸೌದಿ ಅರೇಬಿಯಾ 26 ವರ್ಷಗಳ ಹಿಂದೆ ಕೊಲೆ ಮಾಡಿದ್ದ ಆರೋಪಿಯ ಪತ್ತೆಗೆ ಭಾರತದ ಸಿಬಿಐನ ನೆರವು ಪಡೆದ ಪ್ರಕರಣ ವರದಿಯಾಗಿದೆ

ADVERTISEMENT

ಸೌದಿ ಅರೇಬಿಯಾದಲ್ಲಿ ಹೆವಿ ಮೋಟಾರ್ ಮೆಕ್ಯಾನಿಕ್ ಆಗಿದ್ದ ಮೊಹಮ್ಮದ್ ದಿಲ್ಶಾದ್ ಎಂಬಾತ ತಾನು ಕೆಲಸ ಮಾಡುತ್ತಿದ್ದ ಪ್ರದೇಶದಲ್ಲಿ ವ್ಯಕ್ತಿಯೊಬ್ಬನನ್ನು 1999ರಲ್ಲಿ ಕೊಲೆ ಮಾಡಿದ್ದ. ನಂತರ ಈತ ಗುರುತು ಮರೆಮಾಚಿಕೊಂಡಿದ್ದ. ಆಗಾಗ್ಗ ಕೊಲ್ಲಿ ರಾಷ್ಟ್ರಗಳಿಗೆ ಭೇಟಿ ನೀಡುತ್ತಿದ್ದ. ಇದರ ಮಾಹಿತಿ ಪಡೆದ ಸೌದಿ ಅರೇಬಿಯಾ 2022ರ ಏಪ್ರಿಲ್‌ನಲ್ಲಿ ಪ್ರಕರಣದ ವಿಚಾರಣೆಯನ್ನು ಮತ್ತೊಮ್ಮೆ ಆರಂಭಿಸಿತು.

ಭಾರತದ ಉತ್ತರ ಪ್ರದೇಶ ಮೂಲದವನಾದ ಈತನ ಬಂಧನಕ್ಕೆ ಸೌದಿ ಅರೇಬಿಯಾ ಸಿಬಿಐನ ನೆರವು ಕೋರಿತು. ತನಿಖಾ ಸಂಸ್ಥೆಯು ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯ ದಿಲ್ಶಾದ್ ಅವರ ಊರನ್ನು ಪತ್ತೆ ಮಾಡಿತು. ಜತೆಗೆ ವಿದೇಶಗಳಿಗೆ ತೆರಳಿದ್ದ ಈತನ ಪತ್ತೆಗೆ ಲುಕ್-ಔಟ್ ಸುತ್ತೋಲೆ (LOC) ಹೊರಡಿಸಲಾಯಿತು. ಆದರೆ ಇದು ಆರೋಪಿಯ ಮೇಲೆ ಯಾವುದೇ ಪರಿಣಾಮ ಬೀರಿರಲಿಲ್ಲ.

ನಕಲಿ ಪಾಸ್‌ಪೋರ್ಟ್ ಬಳಸಿ ಈಗ ಕತಾರ್, ಕುವೈತ್ ಮತ್ತು ಸೌದಿಯಲ್ಲಿದ್ದನೆಂಬುದನ್ನು ಸಿಬಿಐ ಅಧಿಕಾರಿಗಳು ಮಾಹಿತಿ ಕಲೆ ಹಾಕಿದ್ದರು. ಆ ಪಾಸ್‌ಪೋರ್ಟ್‌ ಸಂಖ್ಯೆ ಆಧರಿಸಿ ಮತ್ತೊಂದು ಲುಕ್‌ ಔಟ್ ನೋಟಿಸ್‌ ಜಾರಿ ಮಾಡಲಾಯಿತು. ಇದರ ಮಾಹಿತಿಯೇ ಇಲ್ಲದ ಮೋಹಮ್ಮದ್ ದಿಲ್ಶಾದ್ ಆ. 11ರಂದು ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದನು. ಇದರ ಮಾಹಿತಿ ಪಡೆದ ಸಿಬಿಐ ಈತನನ್ನು ವಶಕ್ಕೆ ಪಡೆದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.