ADVERTISEMENT

ಲಂಚ ಆರೋಪ: ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಿದ ಸಿಬಿಐ

ಪಿಟಿಐ
Published 16 ಜನವರಿ 2021, 18:42 IST
Last Updated 16 ಜನವರಿ 2021, 18:42 IST
ಸಿಬಿಐ
ಸಿಬಿಐ   

ನವದೆಹಲಿ: ಲಂಚ ಪಡೆದ ಆರೋಪದ ಮೇಲೆ ಇನ್‌ಸ್ಪೆಕ್ಟರ್‌ ಕಪಿಲ್‌ ಧನಕಡ್‌ ಮತ್ತು ಸ್ಟೆನೋಗ್ರಾಫರ್‌ ಸಮೀರ್‌ ಕುಮಾರ್‌ ಸಿಂಗ್‌ ಅವರನ್ನು ಸಿಬಿಐ ಶನಿವಾರ ಅಮಾನತುಗೊಳಿಸಿದೆ.

₹4,300 ಕೋಟಿ ಬ್ಯಾಂಕ್‌ ವಂಚನೆಯ ಎರಡು ಪ್ರಕರಣಕ್ಕೆ ಸಂಬಂಧಿಸಿದ ತನಿಖೆಯ ಮಾಹಿತಿಯನ್ನು ಒದಗಿಸಲು ಮತ್ತು ತನಿಖೆಯಲ್ಲಿ ರಾಜಿ ಮಾಡಿಕೊಳ್ಳಲು ಈ ಅಧಿಕಾರಿಗಳು ಲಂಚ ಪಡೆದಿದ್ದರು ಎನ್ನಲಾಗಿದೆ.

‘ಧನಕಡ್‌ ಮತ್ತು ಸಮೀರ್‌ ವಿರುದ್ಧ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸಿಬ್ಬಂದಿ ಮತ್ತು ತರಬೇತಿ ಇಲಾಖೆಗೆ ನಿರ್ದೇಶಿಸಲಾಗಿದೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.

ADVERTISEMENT

ಧನಕಡ್‌ ಅವರು ಸುಮಾರು ₹25 ಲಕ್ಷ ಲಂಚ ಸ್ವೀಕರಿಸಿದ್ದಾರೆ ಎಂದು ಹೇಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.