ADVERTISEMENT

ಆಸ್ಥಾನಾ ಪ್ರಕರಣ: ಸುಳ್ಳು ಪತ್ತೆ ಪರೀಕ್ಷೆ ಏಕೆ ನಡೆಸಿಲ್ಲ

ಪಿಟಿಐ
Published 19 ಫೆಬ್ರುವರಿ 2020, 19:42 IST
Last Updated 19 ಫೆಬ್ರುವರಿ 2020, 19:42 IST
ರಾಕೇಶ್‌ ಆಸ್ಥಾನಾ
ರಾಕೇಶ್‌ ಆಸ್ಥಾನಾ   

ನವದೆಹಲಿ: ಲಂಚ ಪಡೆದ ಆರೋಪ ಎದುರಿಸುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐನ ಮಾಜಿ ವಿಶೇಷ ನಿರ್ದೇಶಕ ರಾಕೇಶ್‌ ಆಸ್ಥಾನಾ ವಿರುದ್ಧ ಮಾನಸಿಕ ಹಾಗೂ ಸುಳ್ಳು ಪತ್ತೆ ಪರೀಕ್ಷೆಗಳನ್ನು ಏಕೆ ನಡೆಸಲಿಲ್ಲ ಎಂದು ದೆಹಲಿ ಕೋರ್ಟ್‌ ಸಿಬಿಐ ಅನ್ನು ಬುಧವಾರ ತರಾಟೆಗೆ ತೆಗೆದುಕೊಂಡಿದೆ.

ಆಸ್ಥಾನಾ ಅವರಿಗೆ ಇತ್ತೀಗಷ್ಟೆ ಕ್ಲೀನ್‌ಚಿಟ್‌ ನೀಡಲಾಗಿದೆ.

‘ಪ್ರಕರಣಕ್ಕೆ ಸಂಬಂಧಿಸಿದ ಕೇಸ್‌ ಡೈರಿಯೊಂದಿಗೆ ಫೆ. 28ಕ್ಕೆ ಹಾಜರಾಗಬೇಕು. ವಿಚಾರಣೆ ಕುರಿತಂತೆ ವಿವರಣೆ ನೀಡಬೇಕು’ ಎಂದು ಸಿಬಿಐ ಕೋರ್ಟ್‌ನ ವಿಶೇಷ ನ್ಯಾಯಾಧೀಶ ಸಂಜೀವ್‌ ಅಗರವಾಲ್‌ ಅವರು ಪ್ರಕರಣ ಕುರಿತು ಪ್ರಾರಂಭದಲ್ಲಿ ತನಿಖಾಧಿಕಾರಿಯಾಗಿದ್ದ ಅಜಯ್‌ಕುಮಾರ್‌ ಬಸ್ಸಿ ಅವರಿಗೆ ನಿರ್ದೇಶನ ನೀಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.