ADVERTISEMENT

ಸಿಬಿಎಸ್‌ಇ ಫಲಿತಾಂಶ | ಶೇಕಡ 91.46 ರಷ್ಟು ಉತ್ತೀರ್ಣ, ಬಾಲಕಿಯರ ಮೇಲುಗೈ

ಬೆಂಗಳೂರಿಗೆ ಮೂರನೇ ಸ್ಥಾನ

ಏಜೆನ್ಸೀಸ್
Published 15 ಜುಲೈ 2020, 9:00 IST
Last Updated 15 ಜುಲೈ 2020, 9:00 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   
""

ನವದೆಹಲಿ: ಕೇಂದ್ರೀಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು (ಸಿಬಿಎಸ್‍ಇ) 10ನೇ ತರಗತಿ ಫಲಿತಾಂಶವನ್ನು ಬುಧವಾರ ಪ್ರಕಟಿಸಿದೆ.

ಫೆ. 15ರಿಂದ ಮಾ. 20 ರವರೆಗೆ ಪರೀಕ್ಷೆ ನಡೆದಿತ್ತು. ಈ ಬಾರಿ ಒಟ್ಟಾರೆ ಶೇಕಡ 91.46 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕಳೆದ ವರ್ಷ ಶೇಕಡ 91.10 ರಷ್ಟಿತ್ತು.

ಈ ಬಾರಿ 18,73,015 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಈ ಪೈಕಿ 17,13,121 ಮಂದಿ ಉತ್ತೀರ್ಣರಾಗಿದ್ದಾರೆ. ಇದರಲ್ಲಿಬಾಲಕಿಯರು ಶೇ 93.31, ಬಾಲಕರು ಶೇ 90.14 ರ ಪ್ರಮಾಣದಲ್ಲಿ ಉತ್ತೀರ್ಣರಾಗಿದ್ದಾರೆ.

ADVERTISEMENT

cbseresults.nic.inವೆಬ್‌ಸೈಟ್‌ನಲ್ಲಿ ಫಲಿತಾಂಶ ಲಭ್ಯವಿದೆ.

ಪ್ರದೇಶವಾರು ಫಲಿತಾಂಶ (ಶೇಕಡಾದಲ್ಲಿ)

ತಿರುವನಂತಪುರ- 99.28%
ಚೆನ್ನೈ- 98.95%
ಬೆಂಗಳೂರು –98.23%
ಪುಣೆ –98.05%
ಅಜ್ಮೇರ್- 96.993%
ಪಂಚಕುಲಾ- 94.31
ಭುವನೇಶ್ವರ್- 93.20
ಭೋಪಾಲ್‌ –92.86
ಛಂಡಿಗಡ–91.83
ಪಟ್ನಾ –90.69
ಡೆಹ್ರಾಡೂನ್ –89.72
ಪ್ರಯಾಗ್‌ರಾಜ್- 89.12
ನೋಯ್ಡಾ –87.51

ಈ ಬಗ್ಗೆ ಟ್ವೀಟ್‌ ಮಾಡಿರುವ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ (ಎಚ್‌ಆರ್‌ಡಿ) ರಮೇಶ್‌ ನಿಶಾಂಕ್ ಪೋಖ್ರಿಯಾಲ್‌ಅವರು, ಫಲಿತಾಂಶ ಪ್ರಕಟಿಸಿರುವ ಬಗ್ಗೆ ಖಚಿತಪಡಿಸಿದ್ದಾರೆ.

ಕೋವಿಡ್‌ನಿಂದಾಗಿ, ಬಾಕಿ ಉಳಿದಿದ್ದ ವಿಷಯಗಳ ಪರೀಕ್ಷೆಯನ್ನು ಮಂಡಳಿ ರದ್ದುಪಡಿಸಿತ್ತು. ಹೀಗಾಗಿ, ಪರ್ಯಾಯಮೌಲ್ಯಮಾಪನ ಆಧಾರದಲ್ಲಿ ವಿದ್ಯಾರ್ಥಿಗಳ ಫಲಿತಾಂಶವನ್ನು ಘೋಷಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.