ADVERTISEMENT

ಕೇಂದ್ರ ಸರ್ಕಾರದ ನೇಮಕಾತಿಯಲ್ಲಿ ಬದಲಾವಣೆ: ಪಿ.ಕೆ. ಮಿಶ್ರಾ

ಪಿಟಿಐ
Published 20 ಸೆಪ್ಟೆಂಬರ್ 2025, 13:59 IST
Last Updated 20 ಸೆಪ್ಟೆಂಬರ್ 2025, 13:59 IST
   

ಮುಂಬೈ: ‘ಕೇಂದ್ರ ಸರ್ಕಾರದ ಹುದ್ದೆಗಳು ಮತ್ತು ಸರ್ಕಾರಿ ಸ್ವಾಮ್ಯದ ಕಂಪನಿಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಮಹತ್ವದ ಬದಲಾವಣೆ ತರಲಾಗಿದ್ದು ಇದಕ್ಕಾಗಿ ಡೊಮೈನ್ ಪರಿಣಿತರು ಮತ್ತು ಯೋಗ್ಯತಾ ಮಾರ್ಗದರ್ಶಿಗಳ ಸಲಹೆ ಪಡೆಯಲಾಗುತ್ತಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರ ಪ್ರಧಾನ ಕಾರ್ಯದರ್ಶಿ ಪಿ.ಕೆ. ಮಿಶ್ರಾ ಹೇಳಿದರು.

ಮುಂಬೈನಲ್ಲಿ ‘ಐಐಎಂ’ ಘಟಿಕೋತ್ಸವದಲ್ಲಿ ಮಾತನಾಡಿದ ಅವರು, ‘ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಗಳನ್ನು ವಿಶ್ವಾಸಾರ್ಹ, ನ್ಯಾಯಯುತ ಮತ್ತು ವಸ್ತುನಿಷ್ಠ ವಿಧಾನದಲ್ಲಿ ನೇಮಕಾತಿ ಮಾಡಲಾಗುತ್ತಿದೆ. ಈ ಬದಲಾವಣೆಗಳು ಕಳೆದ ಒಂದು ದಶಕದಿಂದ ಜಾರಿಯಲ್ಲಿವೆ. ವೇಗವಾಗಿ ವಿಕಸಿತಗೊಳ್ಳುತ್ತಿರುವ ಭಾರತದ ಆಡಳಿತ ವ್ಯವಸ್ಥೆಯಲ್ಲೂ ಇದರ ಫಲಗಳು ಕಂಡುಬಂದಿವೆ’ ಎಂದರು. 

ಪ್ರಧಾನಿಯವರ ‘2047ರ ವಿಕಸಿತ ಭಾರತ’ ಪರಿಕಲ್ಪನೆಯು ‘ಸುಧಾರಣೆ, ನಿರ್ವಹಣೆ ಮತ್ತು ವರ್ಗಾವಣೆ’ ಎಂಬ ಮಂತ್ರದೊಂದಿಗೆ ಮುನ್ನಡೆಯುತ್ತಿದೆ. ಈ ಯೋಜನೆಯಡಿ ಭಾರತವು ಜಾಗತಿಕ ನಾವೀನ್ಯತೆಯ ಶಕ್ತಿ ಕೇಂದ್ರವಾಗಿ ಪ್ರವರ್ಧಮಾನಕ್ಕೆ ಬರುತ್ತಿದೆ ಎಂದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.