ನವದೆಹಲಿ: ಪ್ರವೇಶ ಪರೀಕ್ಷೆಗಳಾದ ಜೆಇಇ ಮತ್ತು ನೀಟ್ ಹಾಗೂ 12ನೇ ತರಗತಿಯ ಪಠ್ಯಕ್ರಮಗಳು ಪ್ರಶ್ನಾವಳಿಗಳ ಕಾಠಿಣ್ಯದ ದೃಷ್ಟಿಯಲ್ಲಿ ಸಾಮ್ಯವಾಗಿವೆಯೇ ಎಂಬ ಬಗ್ಗೆ ಅಧ್ಯಯನ ನಡೆಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.
ತರಬೇತಿ, ಪ್ರವೇಶ ಪರೀಕ್ಷೆಗೆ ಸಂಬಂಧಿಸಿದ ಪರಿಶೀಲನೆಗೆ ರಚಿಸಲಾಗಿರುವ ತಜ್ಞರ ಸಮಿತಿಯ ಅಭಿಪ್ರಾಯ ಆಧರಿಸಿ ಈ ಅಧ್ಯಯನ ನಡೆಯಲಿದೆ ಎಂದು ಮೂಲಗಳು ಹೇಳಿವೆ.
12ನೇ ತರಗತಿಯ ಪಠ್ಯಕ್ರಮವು ಪ್ರವೇಶ ಪರೀಕ್ಷೆಗೆ ಪೂರಕವಾಗಿಲ್ಲ. ಆದ್ದರಿಂದ ತರಬೇತಿಯು ಅನಿವಾರ್ಯವಾಗಿದೆ ಎಂದು ಪೋಷಕರು ಮತ್ತು ಕೆಲ ಶಿಕ್ಷಣ ಸಂಸ್ಥೆಗಳ ಉಪನ್ಯಾಸಕರು ಆಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಸಮಿತಿಯು ಅಧ್ಯಯನ ಮಾಡಲಿದೆ.
ಪ್ರವೇಶ ಪರೀಕ್ಷೆಗಳ ಪರಿಣಾಮ, ಪಾರದರ್ಶಕತೆ ಹಾಗೂ ತರಬೇತಿಗಳ ಬಗ್ಗೆ ಅಧ್ಯಯನ ನಡೆಸಲು ಶಿಕ್ಷಣ ಸಚಿವಾಲಯವು 9 ತಜ್ಞರನ್ನೊಳಗೊಂಡ ಸಮಿತಿಯೊಂದನ್ನು ಜೂನ್‌ನಲ್ಲಿ ರಚಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.