ADVERTISEMENT

ಪ್ರವಾಹ, ಭೂಕುಸಿತಕ್ಕೆ ಒಳಗಾದ 5 ರಾಜ್ಯಗಳಿಗೆ ಕೇಂದ್ರದಿಂದ ನೆರವು ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2025, 6:49 IST
Last Updated 19 ಫೆಬ್ರುವರಿ 2025, 6:49 IST
   

ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್‌ ಶಾ ನೇತೃತ್ವದ ಸಮಿತಿಯು 2024ರಲ್ಲಿ ಪ್ರವಾಹ, ಚಂಡಮಾರುತ, ಹಠಾತ್‌ ಪ್ರವಾಹ, ಭೂಕುಸಿತ ಸೇರಿ ಪ್ರಾಕೃತಿಕ ವಿಕೋಪಕ್ಕೆ ಸಿಲುಕಿ ಹಾನಿಗೊಳಗಾದ ಐದು ರಾಜ್ಯಗಳಿಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಯಿಂದ (ಎನ್‌ಡಿಆರ್‌ಎಫ್‌) ₹1,554.99 ಕೋಟಿ ಹೆಚ್ಚುವರಿ ನೆರವು ಬಿಡುಗಡೆ ಮಾಡಿದೆ.

ಇದರಲ್ಲಿ ಆಂಧ್ರ ಪ್ರದೇಶಕ್ಕೆ ₹608.08 ಕೋಟಿ, ನಾಗಾಲ್ಯಾಂಡ್‌ಗೆ ₹170.99 ಕೋಟಿ, ಒಡಿಶಾಗೆ ₹255.24 ಕೋಟಿ, ತೆಲಂಗಾಣಕ್ಕೆ ₹231.75 ಕೋಟಿ ಮತ್ತು ತ್ರಿಪುರಾಕ್ಕೆ ₹288.93 ಕೋಟಿ ನೆರವು ಬಿಡುಗಡೆ ಮಾಡಿದೆ.

ಈ ಕುರಿತು ಸಾಮಾಜಿಕ ಜಾಲತಾಣದ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಶಾ, ‘ಪ್ರಾಕೃತಿಕ ವಿಪತ್ತಿನ ಅವಘಡಗಳಿಂದ ಸಂತ್ರಸ್ತರಾದವರ ಪರ ಮೋದಿ ಸರ್ಕಾರ ಕಲ್ಲಿನಂತೆ ನಿಲ್ಲಲಿದೆ. ಆಂಧ್ರಪ್ರದೇಶ, ನಾಗಾಲ್ಯಾಂಡ್‌, ಒಡಿಶಾ, ತೆಲಂಗಾಣ ಮತ್ತು ತ್ರಿ‍ಪುರಾ ರಾಜ್ಯಗಳಿಗೆ ಎನ್‌ಡಿಆರ್‌ಎಫ್‌ ನಿಧಿಯಡಿ ಹೆಚ್ಚುವರಿ ನೆರವು ಬಿಡುಗಡೆ ಮಾಡಲಾಗಿದೆ. ಈ ಹಿಂದೆ ಎಸ್‌ಡಿಆರ್‌ಎಫ್‌ ನಿಧಿಯಡಿ 27 ರಾಜ್ಯಗಳಿಗೆ ಕೇಂದ್ರ ₹18,322.80 ಕೋಟಿ ಬಿಡುಗಡೆ ಮಾಡಿತ್ತು’ ಎಂದಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.