ADVERTISEMENT

ಸತ್ಯ ನುಡಿಯುವವರ ವಿರುದ್ಧ ಕೇಂದ್ರ ತನಿಖಾ ಏಜೆನ್ಸಿ ಬಳಕೆ: ಮಮತಾ ಬ್ಯಾನರ್ಜಿ

ಪಿಟಿಐ
Published 27 ಜೂನ್ 2022, 14:04 IST
Last Updated 27 ಜೂನ್ 2022, 14:04 IST
ಮಮತಾ ಬ್ಯಾನರ್ಜಿ
ಮಮತಾ ಬ್ಯಾನರ್ಜಿ   

ನವದೆಹಲಿ: ಸತ್ಯವನ್ನು ನುಡಿಯುವವರ ವಿರುದ್ಧ ಕೇಂದ್ರ ಸರ್ಕಾರವು ತನಿಖಾ ಏಜೆನ್ಸಿಗಳನ್ನು ಬಳಕೆ ಮಾಡುತ್ತಿದೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋಮವಾರ ಆರೋಪಿಸಿದ್ದಾರೆ.

ಶಿವಸೇನಾ ಸಂಸದ ಸಂಜಯ್‌ ರಾವುತ್‌ಗೆ ಜಾರಿ ನಿರ್ದೇಶನಾಯಲವು (ಇ.ಡಿ) ಸೋಮವಾರ ಸಮನ್ಸ್‌ ಜಾರಿ ಮಾಡಿದೆ. ಇದರ ವಿರುದ್ಧ ಟಿಎಂಸಿ ವರಿಷ್ಠೆ ಮಮತಾ ಬ್ಯಾನರ್ಜಿ ಧ್ವನಿ ಎತ್ತಿದ್ದಾರೆ.

ಸತ್ಯ ನುಡಿಯುವ ಜನ ಸಾಮಾನ್ಯರ ಮೇಲೆ ಬಿಜೆಪಿ, ಸಿಬಿಐ, ಇ.ಡಿ.ಗಳಂತಹ ಏಜೆನ್ಸಿಗಳನ್ನು ಬಳಕೆ ಮಾಡಿ ಹಿಂಸಿಸುತ್ತಿದೆ. ಇದರಿಂದಾಗಿ ಉದ್ಯಮಿಗಳು ಸೇರಿದಂತೆ ಲಕ್ಷಾಂತರ ಜನರು ದೇಶವನ್ನು ತೊರೆದಿದ್ದಾರೆ ಎಂದು ಹೇಳಿದ್ದಾರೆ.

ಪತ್ರಾ ಚಾಲ್‌ ಭೂ ಹಗರಣ ಪ್ರಕರಣದ ಸಂಬಂಧ ಜೂನ್‌ 28ರಂದು ವಿಚಾರಣೆಗೆ ಹಾಜರಾಗುವಂತೆ ಶಿವಸೇನಾ ನಾಯಕ ಸಂಜಯ್ ರಾವುತ್‌ಗೆ ಇ.ಡಿ ಸಮನ್ಸ್ ಜಾರಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.