ADVERTISEMENT

ಕೋವಿಡ್ ಹೆಚ್ಚಳ: ಕರ್ನಾಟಕ ಸೇರಿದಂತೆ 8 ರಾಜ್ಯಗಳಿಗೆ ಪತ್ರ ಬರೆದ ಕೇಂದ್ರ

ಐಎಎನ್ಎಸ್
Published 30 ಡಿಸೆಂಬರ್ 2021, 18:49 IST
Last Updated 30 ಡಿಸೆಂಬರ್ 2021, 18:49 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಕೋವಿಡ್ ಪ್ರಕರಣಗಳಲ್ಲಿಎರಡು ವಾರಗಳಿಂದ ದಿಢೀರ್ ಏರಿಕೆ ಕಂಡುಬಂದಿರುವ 8 ರಾಜ್ಯಗಳಿಗೆ ಕೇಂದ್ರ ಸರ್ಕಾರ ಗುರುವಾರ ಎಚ್ಚರಿಕೆ ನೀಡಿದೆ.ಬೆಂಗಳೂರು ನಗರ ಸೇರಿ 15 ಜಿಲ್ಲೆಗಳಲ್ಲಿ ಹೆಚ್ಚು ಸೋಂಕು ಪ್ರಕರಣಗಳು ಪತ್ತೆಯಾಗುತ್ತಿವೆ. ದೇಶದಲ್ಲಿ33 ದಿನಗಳ ಬಳಿಕ ಒಟ್ಟು ಕೋವಿಡ್ ಪ್ರಕರಣ ಸಂಖ್ಯೆ 10 ಸಾವಿರದ ಗಡಿ ದಾಟಿದೆ.

ಪ್ರಕರಣ ಅಧಿಕವಾಗಿರುವ ಎಂಟು ರಾಜ್ಯಗಳಲ್ಲಿ ಕಂಟೈನ್‌ಮೆಂಟ್‌ ವಲಯ ರಚಿಸುವುದು, ಆಸ್ಪತ್ರೆಗಳನ್ನು ಸನ್ನದ್ಧಗೊಳಿಸುವುದು ಮತ್ತು ಕೋವಿಡ್ ಪತ್ತೆ ಪರೀಕ್ಷೆಗಳ ಪ್ರಮಾಣವನ್ನು ಹೆಚ್ಚಿಸುವಂತೆ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಸೂಚಿಸಿದ್ದಾರೆ.

ದೇಶದಲ್ಲಿ ನಿತ್ಯ ಸರಿಸುಮಾರು 8 ಸಾವಿರ ಸೋಂಕಿತರು ಪತ್ತೆಯಾಗುತ್ತಿದ್ದರು. ಆದರೆ ಡಿಸೆಂಬರ್ 26ರ ಬಳಿಕ ಈ ಪ್ರಮಾಣ 10 ಸಾವಿರದ ಸನಿಹಕ್ಕೆ ತಲುಪಿದೆ ಎಂದು ಜಂಟಿ ಕಾರ್ಯದರ್ಶಿ ಲವ ಅಗರ್‌ವಾಲ್ ಹೇಳಿದ್ದಾರೆ. ಬುಧವಾರ ಒಂಬತ್ತು ಸಾವಿರ ಇದ್ದ ಪ್ರಕರಣಗಳ ಸಂಖ್ಯೆ 24 ಗಂಟೆಯಲ್ಲಿ 13 ಸಾವಿರಕ್ಕೆ ಏರಿಕೆ ಕಂಡಿವೆ.

ADVERTISEMENT

ಎರಡು ವಾರಗಳ ಅವಧಿಯಲ್ಲಿ, ದೆಹಲಿಯಲ್ಲಿ ಪ್ರಕರಣಗಳ ಸಂಖ್ಯೆ ಐದು ಪಟ್ಟು ಹೆಚ್ಚಳವಾಗಿದೆ. ಗುಜರಾತಿನಲ್ಲಿ ಆರು ಪಟ್ಟು ಅಧಿಕವಾಗಿದೆ. ಮೆಟ್ರೊ ನಗರಗಳ ಪೈಕಿ ಕೋಲ್ಕತ್ತದಲ್ಲಿ ದುಪ್ಪಟ್ಟು ಸೋಂಕಿತರು ಕಂಡು ಬರುತ್ತಿದ್ದಾರೆ.

ಎಲ್ಲೆಲ್ಲಿ ಹೆಚ್ಚು ಸೋಂಕಿತರು?

ಕರ್ನಾಟಕ: ಬೆಂಗಳೂರು ನಗರ

ಮಹಾರಾಷ್ಟ್ರ: ಠಾಣೆ, ಪುಣೆ, ಮುಂಬೈ, ಮುಂಬೈ ಉಪನಗರ, ನಾಗ್ಪುರ

ಗುಜರಾತ್: ಅಹಮದಾಬಾದ್, ರಾಜ್‌ಕೋಟ್ ಮತ್ತು ಸೂರತ್

ಹರಿಯಾಣ: ಗುರುಗ್ರಾಮ

ಜಾರ್ಖಂಡ್: ರಾಂಚಿ

ತಮಿಳುನಾಡು: ಚೆನ್ನೈ

ಪಶ್ಚಿಮ ಬಂಗಾಳ: ಕೋಲ್ಕತ್ತ

ದೆಹಲಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.