ADVERTISEMENT

ಹೈದರಾಬಾದ್‌: ಕರ್ನಾಟಕ ಮೂಲದ ಸರಗಳ್ಳನಿಂದ ಕಾನ್‌ಸ್ಟೆಬಲ್‌ಗೆ ಇರಿತ, ಬಂಧನ

ಪಿಟಿಐ
Published 28 ಜುಲೈ 2022, 14:12 IST
Last Updated 28 ಜುಲೈ 2022, 14:12 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಹೈದರಾಬಾದ್‌: ‘ಜುಲೈ 26ರಂದು ಪರಾರಿಯಾಗುವ ಪ್ರಯತ್ನದಲ್ಲಿ ಕಾನ್‌ಸ್ಟೇಬಲ್‌ಗೆ ಇರಿದ ಆರೋಪಿ ಸೇರಿದಂತೆ ಕರ್ನಾಟಕ ಮೂಲದ ಇಬ್ಬರು ಸರಗಳ್ಳರನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.

‘ಆರೋಪಿಗಳಿಂದ ಉತ್ತರ ಪ್ರದೇಶದಿಂದ ಖರೀದಿಸಲಾದ ಒಂದು ಪಿಸ್ತೂಲ್‌ ಮತ್ತು 13 ಜೀವಂತ ಮದ್ದುಗುಂಡುಗಳು, ಒಂದು ರಿವಾಲ್ವರ್ ಮತ್ತು 2 ಜೀವಂತ ಮದ್ದುಗುಂಡುಗಳು, ಒಂದು ದ್ವಿಚಕ್ರ ವಾಹನ, ಎರಡು ಮೊಬೈಲ್‌ ಫೋನ್‌ಗಳು, ಎರಡು ಚಾಕುಗಳು ಹಾಗೂ ಸುಮಾರು 47 ಗ್ರಾಂ ತೂಕದ ಮೂರು ಚಿನ್ನದ ಸರಗಳನ್ನು ವಶಪಡಿಸಿಕೊಳ್ಳಲಾಗಿದೆ’ ಎಂದು ಹೇಳಿದರು.

‘ಇಬ್ಬರು ಆರೋಪಿಗಳು ಕರ್ನಾಟಕದ ಕಲಬುರಗಿ ಹಾಗೂ ಯಾದಗಿರಿ ಮೂಲದವರು. ಜುಲೈ 25ರಿಂದ 26ರ ಮಧ್ಯದಲ್ಲಿ ಐದು ಅಪರಾಧಗಳನ್ನು ಎಸಗಿದ್ದಾರೆ. ರಸ್ತೆಯಲ್ಲಿ ಓಡಾಡುತ್ತಿದ್ದ ಮಹಿಳೆಯರಿಂದ ಚಿನ್ನದ ಸರಗಳನ್ನು ದೋಚಿದ್ದಾರೆ’ ಎಂದು ಸೈಬರಾಬಾದ್‌ನ ಪೊಲೀಸ್‌ ಕಮಿಷನರೇಟ್‌ನ ಪ್ರಕಟಣೆ ತಿಳಿಸಿದೆ.

ADVERTISEMENT

‘ಇಬ್ಬರು ಆರೋಪಿಗಳ ಪತ್ತೆಗೆ ಪೊಲೀಸ್‌ ತಂಡಗಳನ್ನು ನಿಯೋಜಿಸಲಾಗಿತ್ತು. ಜುಲೈ 26ರಂದು ಆರೋಪಿಗಳನ್ನು ಗುರುತಿಸಿ‌ದ್ದ ಹೆಡ್‌ ಕಾನ್‌ಸ್ಟೇಬಲ್‌ ಯಾದಯ್ಯ ಹಾಗೂ ಇತರ ಪೊಲೀಸ್‌ ಸಿಬ್ಬಂದಿ, ಅವರನ್ನು ಸೆರೆ ಹಿಡಿಯಲು ಬೆನ್ನಟ್ಟಿದ್ದರು. ಈ ವೇಳೆ ಆರೋಪಿಗಳು ಯಾದಯ್ಯ ಅವರ ಹೊಟ್ಟೆ ಹಾಗೂ ಎದೆಗೆ ಇರಿದಿದ್ದರು. ಆದರೂ ಯಾದಯ್ಯ ಆರೋಪಿಯನ್ನು ತಪ್ಪಿಸಿಕೊಳ್ಳಲು ಬಿಡಲಿಲ್ಲ’ ಎಂದು ಸೈಬರಾಬಾದ್‌ನ ಪೊಲೀಸ್‌ ಕಮಿಷನರ್‌ ಸ್ಟೀಫನ್‌ ರವೀಂದ್ರ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.