ADVERTISEMENT

ರಾಕೇಶ್ ಟಿಕಾಯತ್ ಆತುರದ ನಿರ್ಧಾರ: ಎಸ್‌ಕೆಎಂ ಮುಖಂಡ

ಪಿಟಿಐ
Published 7 ಫೆಬ್ರುವರಿ 2021, 4:08 IST
Last Updated 7 ಫೆಬ್ರುವರಿ 2021, 4:08 IST
ಬಿಕೆಯು ಮುಖಂಡ ರಾಕೇಶ್ ಟಿಕಾಯತ್
ಬಿಕೆಯು ಮುಖಂಡ ರಾಕೇಶ್ ಟಿಕಾಯತ್   

ನವದೆಹಲಿ: ಉತ್ತರ ಪ್ರದೇಶ ಹಾಗೂ ಉತ್ತರಾಖಂಡದಲ್ಲಿ 'ಚಕ್ಕಾ ಜಾಮ್' ನಡೆಸದಿರಲು ರಾಕೇಶ್ ಟಿಕಾಯತ್ಆತುರದನಿರ್ಧಾರವನ್ನು ತೆಗೆದುಕೊಂಡಿದ್ದರು. ಅವರು ತಮ್ಮ ಯೋಚನೆಯನ್ನು ಮೊದಲೇ ತಿಳಿಸಿದ್ದರೆ ಉತ್ತಮವಾಗಿರುತ್ತಿತ್ತು ಎಂದು ಸಂಯಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ಹಿರಿಯ ರೈತ ಮುಖಂಡ ದರ್ಶನ್ ಪಾಲ್ ತಿಳಿಸಿದ್ದಾರೆ.

ಕೇಂದ್ರ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ದೆಹಲಿ ಗಡಿ ಪ್ರದೇಶಗಳಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಬೆಂಬಲ ಸೂಚಕವಾಗಿ ಫೆಬ್ರವರಿ 6 ಶನಿವಾರದಂದು ದೇಶವ್ಯಾಪ್ತಿ ಚಕ್ಕಾ ಜಾಮ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಆದರೆ ಕೊನೆ ಕ್ಷಣದಲ್ಲಿ ದೆಹಲಿ ಜೊತೆಗೆ ಉತ್ತರ ಪ್ರದೇಶ ಹಾಗೂ ಉತ್ತರಾಖಂಡ ರಾಜ್ಯಗಳನ್ನು ಹೊರತುಪಡಿಸಲಾಗಿತ್ತು.

ಬಿಕೆಯು ಮುಖಂಡ ರಾಕೇಶ್ ಟಿಕಾಯತ್ ಈ ಹಠಾತ್ ನಿರ್ಧಾರವು ರೈತ ಸಂಘಟನೆಯಲ್ಲಿ ಭಿನ್ನಭಿಪ್ರಾಯಗಳಿಗೆ ಕಾರಣವಾಗಿದೆ ಎಂದು ವರದಿಯಾಗಿತ್ತು. ಇದನ್ನು ಎಸ್‌ಕೆಎಂ ನಿರಾಕರಿಸಿದೆ.

ADVERTISEMENT

ಮಾಧ್ಯಮಗಳಿಗೆ ಹೇಳುವ ಮೊದಲು ಉತ್ತರ ಪ್ರದೇಶ ಹಾಗೂ ಉತ್ತರಾಖಂಡದಲ್ಲಿ ಚಕ್ಕಾ ಜಾಮ್ ಬೇಡ ಎಂಬ ವಿಷಯವನ್ನು ರೈತರೊಂದಿಗೆ ಚರ್ಚಿಸಿದ್ದರೆ ಚೆನ್ನಾಗಿರುತ್ತಿತ್ತು. ನಂತರ ಅವರದನ್ನು ಎಸ್‌ಕೆಎಂ ಮುಖಂಡರೊಂದಿಗೆ ಚರ್ಚಿಸಿದ್ದರು ಎಂದು ದರ್ಶನ್ ಪಾಲ್ ತಿಳಿಸಿದರು.

ರಾಕೇಶ್ ಟಿಕಾಯತ್ಆತುರದಲ್ಲಿನಿರ್ಧಾರವನ್ನು ಘೋಷಣೆ ಮಾಡಿದ್ದರು. ಕೊನೆಗೆ ಇದೊಂದು ಜಂಟಿ ನಿರ್ಧಾರವಾಗಿದ್ದು, ಎಸ್‌ಕೆಎಂ ಒಳಗೆ ಎಲ್ಲವೂ ಉತ್ತಮವಾಗಿದ್ದು, ನಾಯಕರ ನಡುವೆ ಭಿನ್ನಭಿಪ್ರಾಯಗಳಿವೆ ಎಂದು ಭಾವಿಸಬಾರದು ಎಂದು ತಿಳಿಸಿದರು.

ಇಲ್ಲಿ ಗಮನಾರ್ಹ ಅಂಶವೆಂದರೆ ಉತ್ತರ ಪ್ರದೇಶ, ಉತ್ತರಾಖಂಡದಲ್ಲೂ ಚಕ್ಕಾ ಜಾಮ್ ಸಂಪೂರ್ಣ ಯಶಸ್ಸನ್ನು ಕಂಡಿದೆ ಎಂಬ ಹೇಳಿಕೆಯನ್ನು ಎಸ್‌ಕೆಎಂ ಹೊರಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.