ADVERTISEMENT

‘ಚಂದ್ರಯಾನ–2’: ಚಂದ್ರನ ಸನಿಹಕ್ಕೆ ವಿಕ್ರಂ ಲ್ಯಾಂಡರ್

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2019, 19:15 IST
Last Updated 3 ಸೆಪ್ಟೆಂಬರ್ 2019, 19:15 IST
   

ಬೆಂಗಳೂರು:‘ಚಂದ್ರಯಾನ–2’ರ ವಿಕ್ರಂ ಲ್ಯಾಂಡರ್‌ ನೌಕೆಯನ್ನು ಚಂದ್ರನತ್ತ ಮತ್ತಷ್ಟು ಕೆಳಗೆ ಇಳಿಸುವ ಕಾರ್ಯಾಚರಣೆಯನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಮಂಗಳವಾರ ನಡೆಸಿದೆ.

ಮಂಗಳವಾರ ಬೆಳಿಗ್ಗೆ 8.50ರಲ್ಲಿ ನಾಲ್ಕು ಸೆಕೆಂಡ್‌ಗಳ ಈ ಕಾರ್ಯಾಚರಣೆ ನಡೆಸಲಾಗಿದೆ. ವಿಕ್ರಂ ನೌಕೆಯಲ್ಲಿರುವ ಎಂಜಿನ್‌ ಬಳಸಿ ಕಕ್ಷೆಯನ್ನು ಬದಲಿಸಲಾಗಿದೆ. ಈಗ ವಿಕ್ರಂ ನೌಕೆಯು ಚಂದ್ರನಿಂದ 104 ಕಿ.ಮೀ.–128 ಕಿ.ಮೀ. ಎತ್ತರದ ಕಕ್ಷೆಯಲ್ಲಿದೆ.

ಬುಧವಾರ ಬೆಳಗ್ಗಿನ ಜಾವ 3.30ರಿಂದ 4.30ರ ನಡುವೆ ಮತ್ತೊಮ್ಮೆ ಇಂತಹ ಕಾರ್ಯಾಚರಣೆ ನಡೆಸಲಾಗುತ್ತದೆ.

ವಿಕ್ರಂ ಲ್ಯಾಂಡರ್‌ ನೌಕೆ ಮತ್ತು ಕಕ್ಷೆಗಾಮಿ ನೌಕೆ ಸರಿಯಾಗಿ ಕೆಲಸ ಮಾಡುತ್ತಿವೆ ಎಂದು ಇಸ್ರೊ ಮಾಹಿತಿ ನೀಡಿದೆ.

ಸೆಪ್ಟೆಂಬರ್‌ 7ರಂದು ವಿಕ್ರಂ ಲ್ಯಾಂಡರ್‌ ಅನ್ನು ಚಂದ್ರನ ಮೇಲೆ ಇಳಿಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.