ADVERTISEMENT

ಮಧ್ಯಪ್ರದೇಶದ: ಕುನೊ ರಾಷ್ಟ್ರೀಯ ಉದ್ಯಾನದಲ್ಲಿ ಐದು ಚೀತಾ ಮರಿಗಳ ಜನನ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 11 ಮಾರ್ಚ್ 2024, 3:37 IST
Last Updated 11 ಮಾರ್ಚ್ 2024, 3:37 IST
<div class="paragraphs"><p>ಕುನೊ ರಾಷ್ಟ್ರೀಯ ಉದ್ಯಾನದಲ್ಲಿರುವ&nbsp;ಚೀತಾಗಳು</p></div>

ಕುನೊ ರಾಷ್ಟ್ರೀಯ ಉದ್ಯಾನದಲ್ಲಿರುವ ಚೀತಾಗಳು

   

ನವದೆಹಲಿ: ನಮೀಬಿಯಾದಿಂದ ತಂದಿದ್ದ ಚೀತಾವು ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ ಐದು ಮರಿಗಳಿಗೆ ಜನ್ಮ ನೀಡಿದೆ ಎಂದು ಕೇಂದ್ರ ಪರಿಸರ ಸಚಿವ ಭೂಪೇಂದರ್‌ ಯಾದವ್‌ ತಿಳಿಸಿದ್ದಾರೆ.

ಈ ವಿಷಯವನ್ನು ‘ಎಕ್ಸ್‌’ ಮೂಲಕ ತಿಳಿಸಿರುವ ಯಾದವ್, ‘ಹೈ ಫೈವ್, ಕುನೋ! ದಕ್ಷಿಣ ಆಫ್ರಿಕಾದಿಂದ ತರಲಾದ 5 ವರ್ಷದ ‘ಗಾಮಿನಿ’ ಹೆಸರಿನ ಚೀತಾವು 5 ಮರಿಗಳಿಗೆ ಜನ್ಮ ನೀಡಿದೆ. ಇದರಿಂದ ನಮ್ಮ ಸಂತೋಷ ದುಪ್ಪಟ್ಟಾಗಿದೆ. ಎಲ್ಲರಿಗೂ ಅಭಿನಂದನೆಗಳು’ ಎಂದು ಹೇಳಿದ್ದಾರೆ.

ADVERTISEMENT

ಇದು ಭಾರತದ ನೆಲದಲ್ಲಿ ಮರಿಗಳಿಗೆ ಜನ್ಮ ನೀಡಿದ ನಾಲ್ಕನೇ ಚೀತಾ ಇದಾಗಿದೆ. ಕಳೆದ ವರ್ಷ ಮಾರ್ಚ್‌ನಲ್ಲಿ ಜ್ವಾಲಾ ಹೆಸರಿನ ಚೀತಾವು ನಾಲ್ಕು ಮರಿಗಳಿಗೆ ಜನ್ಮ ನೀಡಿತ್ತು. ಆದರೆ, ಅವುಗಳ ಪೈಕಿ ಒಂದು ಮರಿ ಮಾತ್ರ ಬದುಕುಳಿಯುವಲ್ಲಿ ಯಶಸ್ವಿಯಾಗಿತ್ತು. ಇದಕ್ಕೂ ಮುನ್ನ ಆಶಾ ಹೆಸರಿನ ಚೀತಾವು ಮೂರು ಮರಿಗಳಿಗೆ ಜನ್ಮ ನೀಡಿತ್ತು.

ಇದರೊಂದಿಗೆ ಕುನೊ ಉದ್ಯಾನವನದಲ್ಲಿ ಮರಿಗಳು ಸೇರಿದಂತೆ ಒಟ್ಟು ಚೀತಾಗಳ ಸಂಖ್ಯೆ 26ಕ್ಕೆ ಏರಿಕೆಯಾಗಿದೆ. ಕಳೆದ ವರ್ಷದಿಂದ ಇಲ್ಲಿಯವರೆಗೆ ಕುನೊದಲ್ಲಿ ಒಟ್ಟು 10 ಚೀತಾ ಮೃತಪಟ್ಟಿವೆ. ಅವುಗಳಲ್ಲಿ ಏಳು ವಯಸ್ಕ ಚೀತಾಗಳಾಗಿದ್ದರೆ, ಮೂರು ಮರಿ ಚೀತಾಗಳು. ಈ ವರ್ಷದ ಜನವರಿ 16ರಂದು 10ನೇ ಚೀತಾ ಮೃತಪಟ್ಟಿತ್ತು. ಅದಕ್ಕೆ ಶೌರ್ಯ‌ ಎಂದು ಹೆಸರಿಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.