
ಪಿಟಿಐ
ಎಫ್‌ಐಆರ್
ಚೆನ್ನೈ: ಒಡಿಶಾದ ವಲಸೆ ಕಾರ್ಮಿಕ ಸೂರಜ್ ಉತ್ತರ ಭಾರತೀಯ ಎಂಬ ಕಾರಣಕ್ಕಾಗಿ ಕಾನೂನು ಸಂಘರ್ಷಕ್ಕೆ ಒಳಗಾದ ನಾಲ್ವರು ಬಾಲಕರು ಆತನ ಮೇಲೆ ಹಲ್ಲೆ ನಡೆಸಿಲ್ಲ ಎಂದು ಐಜಿಪಿ(ಉತ್ತರ ವಲಯ) ಅಸ್ರಾ ಗರ್ಗ್ ಮಂಗಳವಾರ ಹೇಳಿದ್ದಾರೆ.
‘ಚೆನ್ನೈ– ತಿರುತ್ತಣಿ ಎಮು ರೈಲಿನಲ್ಲಿ ಪ್ರಯಾಣಿಸುವ ವೇಳೆ, ಸೂರಜ್ ತಮ್ಮನ್ನು ಗುರಾಯಿಸಿದ ಎಂದು ನಾಲ್ವರು ಬಾಲಕರು ಶಂಕಿಸಿದರು. ಇದು ಅವರ ನಡುವೆ ಮಾತಿನ ಚಕಮಕಿಗೆ ಕಾರಣವಾಯಿತು ಎಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.