ಚೆನ್ನೈ: ಗ್ಯಾಂಗ್ರೀನ್‌ನಿಂದಾಗಿ ಐದು ಬೆರಳುಗಳನ್ನು ಕಳೆದುಕೊಂಡ 24 ವಾರಗಳ ಮಗುವಿನ ನೋವು ಮತ್ತು ಸಂಕಟಕ್ಕೆ ಪರಿಹಾರವಾಗಿ ₹10 ಲಕ್ಷ ಹಾಗೂ ಚಿಕಿತ್ಸೆಗೆ ಮಾಡಿದ ₹23.65 ಲಕ್ಷ ಖರ್ಚನ್ನು ನೀಡುವಂತೆ ಚೆನ್ನೈ ಉತ್ತರ ಜಿಲ್ಲಾ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗವು ನಗರದ ಆಸ್ಪತ್ರೆ ಮತ್ತು ವೈದ್ಯರೊಬ್ಬರಿಗೆ ಸೂಚಿಸಿದೆ.
‘ಚಿಕಿತ್ಸೆ ನಡೆಸಲು ಯಾವ ರೀತಿಯ ತುರ್ತು ಇತ್ತು ಅಥವಾ ಅದಕ್ಕೆ ಒಪ್ಪಿಗೆಯನ್ನು ಏಕೆ ಪಡೆದಿರಲಿಲ್ಲ ಎಂಬುದನ್ನು ವಿವರಿಸಲು ಆಸ್ಪತ್ರೆ ಮತ್ತು ವೈದ್ಯರು ವಿಫಲರಾಗಿದ್ದಾರೆ’ ಎಂದು ಅದು ಹೇಳಿದೆ.
ಸರಿಯಾದ ಒಪ್ಪಿಗೆ ಪಡೆಯದೆ ಗರ್ಭಕಂಠದ ‘ಪೆಸರಿ ಶಸ್ತ್ರಚಿಕಿತ್ಸೆ’ಯ ಮೂಲಕ ಅವಧಿಪೂರ್ವ ಪ್ರಸವ ಮಾಡಿಸಲಾಗಿತ್ತು ಎಂದು ವರದಿಯಾಗಿದೆ. ಈ ಶಸ್ತ್ರಚಿಕಿತ್ಸೆಯ ಪರಿಣಾಮದಿಂದಲೇ ಮಗುವಿಗೆ ಗ್ಯಾಂಗ್ರೀನ್ ಆಗಿತ್ತು ಎಂದು ಆಯೋಗ ಅಭಿಪ್ರಾಯಪಟ್ಟಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.