ADVERTISEMENT

ನಿರ್ಮಲಾ ಸೀತಾರಾಮನ್ ಅವಕಾಡೊ ತಿನ್ನುತ್ತಾರಾ?: ಚಿದಂಬರಂ ಪ್ರಶ್ನೆ 

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2019, 9:29 IST
Last Updated 5 ಡಿಸೆಂಬರ್ 2019, 9:29 IST
ಈರುಳ್ಳಿ ಬೆಲೆ ಏರಿಕೆ ಖಂಡಿಸಿ ಪ್ರತಿಭಟಿಸುತ್ತಿರುವ ಪಿ.ಚಿದಂಬರಂ
ಈರುಳ್ಳಿ ಬೆಲೆ ಏರಿಕೆ ಖಂಡಿಸಿ ಪ್ರತಿಭಟಿಸುತ್ತಿರುವ ಪಿ.ಚಿದಂಬರಂ   

ನವದೆಹಲಿ: ಈರುಳ್ಳಿ ಬೆಲೆ ಏರಿಕೆ ಬಗ್ಗೆ ಸಂಸತ್ತಿನಲ್ಲಿ ಚರ್ಚೆ ನಡೆಯುತ್ತಿರುವಾಗ ನಾನು ಈರುಳ್ಳಿ ತಿನ್ನುವುದಿಲ್ಲ. ಈರುಳ್ಳಿ- ಬೆಳ್ಳುಳ್ಳಿ ತಿನ್ನದ ಕುಟುಂಬ ನನ್ನದು ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದರು.

ನಿರ್ಮಲಾ ಅವರ ಈ ಹೇಳಿಕೆಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ನೇತಾರ ಪಿ. ಚಿದಂಬರಂ, ವಿತ್ತ ಸಚಿವರು ಈರುಳ್ಳಿ ತಿನ್ನದೇ ಇರುವುದರಿಂದ ಅದರ ಬೆಲೆ ಏರಿಕೆ ಬಗ್ಗೆ ಅವರು ತಲೆ ಕೆಡಿಸಿಕೊಂಡಿಲ್ಲ. ಹಾಗಾದರೆ ಅವರು ಏನು ತಿನ್ನುತ್ತಾರೆ? ಅವರು ಅವಕಾಡೊ ತಿನ್ನುತ್ತಾರಾ? ಅವರು ಈರುಳ್ಳಿ ತಿನ್ನುವುದಿಲ್ಲವಂತೆ ಎಂದಿದ್ದಾರೆ.

ಮಾರುಕಟ್ಟೆಯಲ್ಲಿ ಅವಕಾಡೊ ಬೆಲೆ ಕೆಜಿಗೆ ₹350- ₹400 ಇದೆ. ಈರುಳ್ಳಿ ಬೆಲೆ ಏರುತ್ತಲೇ ಇದ್ದು ಕೆಲವು ರಾಜ್ಯಗಳಲ್ಲಿಕೆಜಿಗೆ ₹180 ಆಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.