ADVERTISEMENT

ಲಖನೌ | ಜೆಸಿಬಿ ತಗುಲಿ ಮಗು ಸಾವು

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2025, 14:22 IST
Last Updated 8 ಮಾರ್ಚ್ 2025, 14:22 IST
<div class="paragraphs"><p>ಸಾವು&nbsp; (ಪ್ರಾತಿನಿಧಿಕ ಚಿತ್ರ)</p></div>

ಸಾವು  (ಪ್ರಾತಿನಿಧಿಕ ಚಿತ್ರ)

   

ಲಖನೌ: ನಿರ್ಮಾಣ ಹಂತದ ಕಟ್ಟಡದ ಜಾಗದಲ್ಲಿ ಜೆಸಿಬಿ ಚಾಲಕನೊಬ್ಬ ಕೆಲಸ ಮಾಡುತ್ತಿದ್ದ ವೇಳೆ 6 ವರ್ಷದ ಮಗುವಿಗೆ ಆಕಸ್ಮಿಕವಾಗಿ ಡಿಕ್ಕಿ ಹೊಡೆದು, ಮೃತಪಟ್ಟ ಪ್ರಕರಣ ಹರ್ದೋಯಿ ಜಿಲ್ಲೆಯಲ್ಲಿ ಶನಿವಾರ ನಡೆದಿದೆ.

ಜೆಸಿಬಿ ಚಾಲಕ ವರ್ಷಾ ಸಿಂಗ್‌ ಅವರು ಮಣ್ಣು ತೆಗೆಯುವ ಕೆಲಸ ಮಾಡುತ್ತಿದ್ದರು. ಅದೇ ಜಾಗದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರ ಮಗುವೊಂದು ಆಟವಾಡುತ್ತಿತ್ತು. ಈ ವೇಳೆ ಜೆಸಿಬಿ ಆಕಸ್ಮಿಕವಾಗಿ ಮಗುವಿಗೆ ತಗುಲಿ ತೀವ್ರವಾದ ಗಾಯವಾಗಿದೆ. ಚಾಲಕನೇ ಮಗುವನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ದಿದ್ದು, ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. 

ADVERTISEMENT

ಬಂಧನದ ಭೀತಿಯಿಂದ ಪಾರಾಗಲು ಚಾಲಕನು, ಡಿಕ್ಕಿಯಾದ ಜಾಗದಲ್ಲೇ ಮಗುವಿನ ದೇಹದ ಮೇಲೆ ಮಣ್ಣಿನ ರಾಶಿ ಹಾಕಿ ಮುಚ್ಚಿಹಾಕಿದ್ದಾರೆ. 

ದೂರಿನ ಬಳಿಕ ಪ್ರಕರಣ ಬಯಲು: ಮಗು ಕಣ್ಮರೆಯಾದ ಕುರಿತು ಮಗುವಿನ ಹೆತ್ತವರು ‍‍ಪೊಲೀಸರಿಗೆ ದೂರು ನೀಡಿದ್ದಾರೆ. ನಾಪತ್ತೆ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೆತ್ತಿಕೊಂಡ ವೇಳೆ ಮಗು ಕೂಡ ಅಲ್ಲಿಯೇ ಆಟವಾಡುತ್ತಿದ್ದ ಮಾಹಿತಿ ಗೊತ್ತಾಗಿದೆ. ತಕ್ಷಣವೇ ಜೆಸಿಬಿ ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ ವೇಳೆ ಮಗುವನ್ನು ಮಣ್ಣಿನಡಿಯಲ್ಲಿ ಹೂತು ಹಾಕಿದ ಜಾಗವನ್ನು ತೋರಿಸಿದ್ದಾರೆ. 

‘ಜೆಸಿಬಿ ತಾಗಿದ ತಕ್ಷಣ, ಮಗು ಗಂಭೀರವಾಗಿ ಗಾಯಗೊಂಡಿದ್ದರಿಂದ ಬದುಕುಳಿಯಲಿಲ್ಲ. ಬಂಧನದಿಂದ ತಪ್ಪಿಸಿಕೊಳ್ಳಲು ಮಣ್ಣುಹಾಕಿ ಮುಚ್ಚಿಹಾಕಿದ್ದೆ’ ಎಂದು ತಿಳಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.